Select Your Language

Notifications

webdunia
webdunia
webdunia
webdunia

ಚಿನ್ನದ ದರ ಅಕ್ಷಯ ತೃತೀಯದಲ್ಲಿ ಕುಸಿತ, ಪ್ರತಿ 10 ಗ್ರಾಂ.ಗೆ 27,100 ರೂ.

ಚಿನ್ನದ ದರ ಅಕ್ಷಯ ತೃತೀಯದಲ್ಲಿ ಕುಸಿತ, ಪ್ರತಿ 10 ಗ್ರಾಂ.ಗೆ 27,100 ರೂ.
ನವದೆಹಲಿ , ಮಂಗಳವಾರ, 21 ಏಪ್ರಿಲ್ 2015 (18:34 IST)
ಅಕ್ಷಯ ತೃತೀಯ ಉತ್ಸವವು ದುರ್ಬಲ ಜಾಗತಿಕ ಪ್ರವೃತ್ತಿಯ ನಡುವೆ ಗಣನೀಯ ಚಿನ್ನದ ಖರೀದಿ ಭರಾಟೆಯನ್ನು ಉಂಟುಮಾಡಲು ವಿಫಲವಾಗಿದ್ದು,  ಚಿನಿವಾರ ಪೇಟೆಯಲ್ಲಿ ಚಿನ್ನದ ದರ 100 ರೂ. ಕುಸಿತ ಉಂಟಾಗಿ ಪ್ರತಿ ಹತ್ತು ಗ್ರಾಂ.ಗೆ 27,100 ರೂ. ಮುಟ್ಟಿದೆ. 
 
ಬೆಳ್ಳಿ ಕೂಡ 560 ರೂ. ಕುಸಿತ ಉಂಟಾಗಿ ಕೆಜಿಗೆ 36, 440 ರೂ. ಮುಟ್ಟಿದೆ. ಕೈಗಾರಿಕೆ ಘಟಕಗಳು ಮತ್ತು ನಾಣ್ಯ ತಯಾರಕರ ಖರೀದಿ ಇಳಿಮುಖದಿಂದ ಈ ಬೆಳವಣಿಗೆ ಉಂಟಾಗಿದೆ.

ವಿದೇಶಿ ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿಯಿಂದಾಗಿ ಷೇರುಗಳು ಮತ್ತು ಡಾಲರ್ ಖರೀದಿ ಭರಾಟೆಯಿಂದ ಹಾಗೂ ಆಭರಣ ತಯಾರಕರ ಖರೀದಿ ಕೊರತೆ ಚಿನ್ನದ ದರ ಕುಸಿತಕ್ಕೆ ಕಾರಣವಾಗಿದೆ. ಆದಾಗ್ಯೂ ಅಕ್ಷಯ ತೃತೀಯದ ಪವಿತ್ರ ಸಂದರ್ಭದಲ್ಲಿ ಸಾಂಕೇತಿಕ ಚಿಲ್ಲರೆ ಖರೀದಿಯಿಂದಾಗಿ ಚಿನ್ನದ ದರ ಮತ್ತಷ್ಟು ಕುಸಿತವಾಗುವುದನ್ನು ತಡೆದಿದೆ.

Share this Story:

Follow Webdunia kannada