Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಗಾಡ್ರೇಜ್ ಪ್ರಾಪರ್ಟೀಸ್ ಗೃಹನಿರ್ಮಾಣ ಯೋಜನೆ

ಬೆಂಗಳೂರಿನಲ್ಲಿ ಗಾಡ್ರೇಜ್ ಪ್ರಾಪರ್ಟೀಸ್ ಗೃಹನಿರ್ಮಾಣ ಯೋಜನೆ
ನವದೆಹಲಿ , ಮಂಗಳವಾರ, 31 ಮಾರ್ಚ್ 2015 (13:31 IST)
ಸ್ಥಿರಾಸ್ತಿ ಮಾರಾಟ ಸಂಸ್ಥೆ ಗಾಡ್ರೇಜ್ ಪ್ರಾಪರ್ಟೀಸ್ ಬೆಂಗಳೂರಿನಲ್ಲಿ ಗೃಹನಿರ್ಮಾಣ ಯೋಜನೆಯನ್ನು ಅಭಿವೃದ್ಧಿಪಡಿಸಲು ಹೊಸ ಒಪ್ಪಂದಕ್ಕೆ ಪ್ರವೇಶಿಸಿದೆ. ಉದ್ದೇಶಿತ ಯೋಜನೆಯಲ್ಲಿ  79000 ಚದರ ಮೀಟರ್ ಮಾರಾಟದ ಪ್ರದೇಶವನ್ನು ಆಫರ್ ಮಾಡಲಿದೆ.
 
ಗಾಡ್ರೇಜ್ ಗ್ರೂಪ್‌ನ ಸ್ಥಿರಾಸ್ತಿ ಅಭಿವೃದ್ಧಿ ಅಂಗವಾದ ಗಾಡ್ರೇಜ್ ಪ್ರಾಪರ್ಟೀಸ್ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವಸತಿ ಯೋಜನೆಯ ಅಭಿವೃದ್ಧಿಗೆ ಹೊಸ ಒಪ್ಪಂದ ಮಾಡಿಕೊಂಡಿದ್ದು,  ಇದು ಬೆಂಗಳೂರಿನಲ್ಲಿ ನಮ್ಮ 8ನೇ ಯೋಜನೆಯಾಗಿದೆ. ವೈಟ್‌ಫೀಲ್ಡ್‌ನಲ್ಲಿ ಎರಡನೇ ಯೋಜನೆಯಾಗಿದೆ ಎಂದು ಗಾಡ್ರೇಜ್ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಿರೋಜ್‌ಶಾ ಗಾಡ್ರೇಜ್ ಹೇಳಿದರು. 
 
ಪ್ರಸಕ್ತ ಗಾಡ್ರೇಜ್ ಪ್ರಾಪರ್ಟೀಸ್ ವಸತಿ, ವಾಣಿಜ್ಯ ಮತ್ತು ಟೌನ್‌ಷಿಪ್ ಯೋಜನೆಗಳನ್ನು 12 ನಗರಗಳಲ್ಲಿ ಹರಡಿಕೊಂಡಿರುವ 108 ದಶಲಕ್ಷ ಚದರಅಡಿ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದೆ. 

Share this Story:

Follow Webdunia kannada