Select Your Language

Notifications

webdunia
webdunia
webdunia
webdunia

ಕಡಿಮೆ ವೆಚ್ಚದ ಗೋ ಏರ್ ವಿಮಾನದ ಟಿಕೆಟ್ ಬುಕಿಂಗ್ ಇಂದು ಆರಂಭ

ಕಡಿಮೆ ವೆಚ್ಚದ ಗೋ ಏರ್ ವಿಮಾನದ  ಟಿಕೆಟ್ ಬುಕಿಂಗ್ ಇಂದು ಆರಂಭ
ನವದೆಹಲಿ , ಸೋಮವಾರ, 22 ಡಿಸೆಂಬರ್ 2014 (12:55 IST)
ವಾಡಿಯಾ ಗ್ರೂಪ್ ಪ್ರಾಯೋಜಿತ ಮಿತವ್ಯಯ ಪ್ರಯಾಣದ ಗೋಏರ್ ವಿಮಾನ ಸಂಸ್ಥೆ ಮುಂದಿನ ವರ್ಷದ ಪ್ರಯಾಣಕ್ಕೆ 1.7 ದಶಲಕ್ಷ ಸೀಟುಗಳನ್ನು ಮಾರಾಟಕ್ಕಿಟ್ಟಿದ್ದು, ಆಫರಿಂಗ್ ದರಗಳು 1459 ರೂ.ನಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.

ಮಂದಗತಿಯ ದಿನಗಳಲ್ಲಿ ಬೇಡಿಕೆಗೆ ಉತ್ತೇಜಿಸುವುದಕ್ಕಾಗಿ  ಐದು ದಿನಗಳ ಬುಕಿಂಗ್ ಅವಧಿ ಇಂದು ಆರಂಭವಾಗಿದೆ. ಜನವರಿ 1ರಿಂದ ಜನವರಿ 31ರವರೆಗೆ ಪ್ರಯಾಣದ ಅವಧಿಗೆ ಗೋಏರ್ ಜಾಲದ ಫ್ಲೈಟ್‌ಗಳಲ್ಲಿ ವಿಶೇಷ ಆಫರ್ ಲಭ್ಯವಿದೆ.

ಈ ಆಫರ್ ಅನ್ವಯ ಡಿ.21ರಂದಿ 25ರವರೆಗೆ ಬುಕಿಂಗ್ ಮಾಡಬಹುದು. ಜನವರಿ-ಮಾರ್ಚ್ ತ್ರೈಮಾಸಿಕ ಸಾಂಪ್ರದಾಯಿಕವಾಗಿ ಮಂದ ಗತಿಯ ಅವಧಿಯಾಗಿದ್ದು, ಈ ಅವಧಿಯಲ್ಲಿ ವಿಮಾನ ಪ್ರಯಾಣ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡಲು ಈ ದರಗಳನ್ನು ಪರಿಚಯಿಸಲಾಗಿದೆ ಎಂದು ಗೋಏರ್ ಮುಖ್ಯ ಎಕ್ಸಿಕ್ಯೂಟಿವ್ ಜಿಯೋರ್ಜಿಯೋ ಡಿ ರೋನಿ ತಿಳಿಸಿದರು.  

Share this Story:

Follow Webdunia kannada