Select Your Language

Notifications

webdunia
webdunia
webdunia
webdunia

ಈಗ ಜಿ-ಮೇಲ್‌‌‌‌‌ನಲ್ಲಿ ಫೋಟೋ ಕಳುಹಿಸಿವುದು ತುಂಬಾ ಸರಳ .

ಈಗ ಜಿ-ಮೇಲ್‌‌‌‌‌ನಲ್ಲಿ ಫೋಟೋ ಕಳುಹಿಸಿವುದು ತುಂಬಾ ಸರಳ .
ನವದೆಹಲಿ , ಸೋಮವಾರ, 30 ಜೂನ್ 2014 (16:48 IST)
ಇಲ್ಲಿಯವರೆಗೆ ನೀವು ಫೋಟೋಗಳನ್ನು ಯಾರಿಗಾದರು ಮೇಲ್‌ ಮಾಡಬೇಕೆಂದರೆ ನೀವು ಅಟ್ಯಾಚ್‌‌‌ ರೂಪದಲ್ಲಿ ಕಳುಹಿಸುತ್ತಿದ್ದಿರಿ. ಆದರೆ ಈಗ ನಿಮ್ಮ ಫೋಟೊಗಳನ್ನು ನೀವು ಡೈರೆಕ್ಟ್‌ ಆಗಿ ಶೀಘ್ರದಲ್ಲಿ ಮೇಲ್‌ ಮಾಡಬಹುದಾಗಿದೆ. ಇದಕ್ಕಾಗಿ ಜಿ-ಮೇಲ್‌ ಇನ್ಸರ್ಟ್‌‌‌ ಫೋಟೋ ಆಫ್ಶನ್ಸ್‌ ‌‌‌ಹೊಸದಾಗಿ ಸೇರಿಸಿದೆ. ಮೆಸೆಜ್‌ ಬಾಡಿ ಕೆಳಗಡೆ ಈ ಆಫ್ಶನ್ಸ್‌‌ ಇದೆ. 

webdunia
 
ಇದರ ಮೇಲೆ ಕ್ಲಿಕ್‌ ಮಾಡಿದರೆ "ಗೂಗಲ್‌ ಫೋಟೋ' ಹೆಸರಿನ ಒಂದು ಬಾಕ್ಸ್‌ ಓಪನ್‌ ಆಗುತ್ತದೆ. ನೀವು ಮೊದಲು ಗೂಗಲ್‌ ಪ್ಲಸ್‌‌‌ನಲ್ಲಿ ಅಪಲೋಡ್‌ ಮಾಡಿದ ಫೋಟೋಗಳನ್ನು ತೋರಿಸುತ್ತವೆ. ಇದರ ಹೊರತು ನೀವು ಖುದ್ದಾಗಿ ಹೊಸ ಫೋಟೋಗಳನ್ನು ಕೂಡ ಸುರಕ್ಷಿತವಾಗಿ ಇಲ್ಲಿ ಇಡಬಹುದು. ಇದಕ್ಕಾಗಿ ಅಪಲೋಡ್‌‌‌ ಆಫ್ಶನ್ಸ್‌ ಕೂಡ ಇದೆ. ಇದರ ಜೊತೆಗೆ ಬಲ್ಕ್‌‌ ಫೋಟೋಗಳನ್ನು ಕೂಡ ಕಳುಹಿಸುವುದು ಈಗ ಸುಲಭವಾಗಿದೆ. ಗೂಗಲ್‌‌‌ ಫೋಟೋದಲ್ಲಿದ್ದ ಅಲ್ಬಮ್‌‌‌‌ನಲ್ಲಿಯ ಯಾವುದೇ ಫೋಟೋ ಫೋಲ್ಡರ್‌‌‌ ನೀವು ಸೆಲೆಕ್ಟ್‌ ಮಾಡಿದಾಗ , ಈ ಎಲ್ಲಾ ಫೋಟೋಗಳು ಮೆಸೆಜ್‌‌‌ ಬಾಡಿಯಲ್ಲಿ ಸೇರುತ್ತವೆ. 

webdunia
ಪ್ರತಿ ಎರಡು ಫೋಟೊಗಳ ನಡುವೆ ಫೋಟೋಗೆ ಸಂಬಂಧಿಸಿದ ವಿಷಯ ಕೂಡ ಬರೆಯಬಹುದಾಗಿದೆ. ಇದಕ್ಕು ಮೊದಲು ಅಟ್ಯಾಚ್‌‌ಮೆಂಟ್‌‌‌‌‌ ಜೊತೆಗೆ ಕಳುಹಿಸುವ ಫೋಟೋಗಳಲ್ಲಿ ಈ ರೀತಿ ಬರೆಯಲು ಆಗುತ್ತಿರಲಿಲ್ಲ. 

Share this Story:

Follow Webdunia kannada