Select Your Language

Notifications

webdunia
webdunia
webdunia
webdunia

ಬಾಗಿಲು ಮುಚ್ಚಿದ ಜನರಲ್ ಮೋಟಾರ್ಸ್ ಘಟಕ

ಬಾಗಿಲು ಮುಚ್ಚಿದ ಜನರಲ್ ಮೋಟಾರ್ಸ್ ಘಟಕ
New Delhi , ಸೋಮವಾರ, 6 ಮಾರ್ಚ್ 2017 (21:11 IST)
ಗುಜರಾತ್‌ನಲ್ಲಿನ ಹಲೋಲ್ ಜನರಲ್ ಮೋಟರ್ಸ್ ಘಟಕವನ್ನು ಏಪ್ರಿಲ್ 2017ರಿಂದ ಮುಚ್ಚುತ್ತಿರುವುದಾಗಿ ಪ್ರಕಟಿಸಿದೆ. ಈ ಹಿಂದೆ ಈ ಘಟಕವನ್ನು ಜುಲೈ 2016ರಲ್ಲೇ ಮುಚ್ಚಲು ತೀರ್ಮಾನಿಸಲಾಗಿತ್ತು. ಆ ಬಳಿಕ ಮಾರ್ಚ್ 2017ರಲ್ಲಿ ಮುಚ್ಚಲು ಭಾವಿಸಿದ್ದರು.
 
ಕಡೆಗೆ ಇದರ ಗಡುವನ್ನು ಏಪ್ರಿಲ್ 2017ಕ್ಕೆ ಮುಂದೂಡಿಲಾಗಿದೆ. ಆದರೆ ಏಪ್ರಿಲ್‍ನಲ್ಲಿ ಯಾವಾಗ ಮುಚ್ಚುತ್ತಾರೆ ಎಂಬುದು ಸ್ಪಷ್ಟಪಡಿಸಿಲ್ಲ. ಈ ಘಟಕವನ್ನು ಮುಚ್ಚುತ್ತಿರುವ ಬಗ್ಗೆ ಗುಜರಾತ್ ಸರಕಾರಕ್ಕೆ ನಿಜಕ್ಕೂ ಇಷ್ಟವಿರಲಿಲ್ಲ. ಈ ಹಿಂದೆಯೂ ಮುಚ್ಚುವ ಪ್ರಸ್ತಾವನೆಯನ್ನು ಸರಕಾರ ತಿರಸ್ಕರಿಸಿತ್ತು.
 
ಈ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 650 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಹಲವು ಯೋಜನೆಗಳನ್ನು ಸಿದ್ಧ ಮಾಡಲಾಗುತ್ತಿದೆ. ಇದರ ಭಾಗವಾಗಿ ಉದ್ಯೋಗಿಗಳಿಗೆ ಮೂರು ತಿಂಗಳ ಸಂಬಳ ಕೊಡಲು ಮುಂದಾಗಿದೆ. ಹಾಗಾಗಿ 650 ಉದ್ಯೋಗಿಗಳು ವಾಲೆಂಟರಿ ಸಪರೇಷನ್ ಸ್ಕೀಂ ತೆಗೆದುಕೊಳ್ಳಲು ಅಂಗೀಕರಿಸಿದ್ದಾರೆ. ಉಳಿದ 350 ಉದ್ಯೋಗಿಗಳನ್ನು ಪುಣೆ ಸಮೀಪದ ಟಲಿಗಾನ್ ಫ್ಯಾಕ್ಟರಿಗೆ ಕಳುಹಿಸಲಿದ್ದಾರೆ. ಅಲ್ಲಿ ಬೀಟ್ ಸೆಯಿಲ್, ಕ್ರೂಜ್, ಎಂಜಾಯ್, ಟವೆರಾಗಳನ್ನು ತಯಾರಿಸಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಸಾವಿನಲ್ಲಿ ಪಿತೂರಿ, ಷಡ್ಯಂತ್ರ ನಡೆದಿಲ್ಲ: ಏಮ್ಸ್ ವೈದ್ಯರು