Select Your Language

Notifications

webdunia
webdunia
webdunia
webdunia

ನ.1ರಿಂದ ಎಟಿಎಂನಿಂದ ಆಗಾಗ್ಗೆ ಹಣ ತೆಗೆಯುವುದು ದುಬಾರಿ

ನ.1ರಿಂದ ಎಟಿಎಂನಿಂದ ಆಗಾಗ್ಗೆ ಹಣ ತೆಗೆಯುವುದು ದುಬಾರಿ
ಬೆಂಗಳೂರು , ಶುಕ್ರವಾರ, 31 ಅಕ್ಟೋಬರ್ 2014 (15:08 IST)
ನವೆಂಬರ್ ಒಂದರಿಂದ ಎಟಿಎಂನಿಂದ ಆಗಾಗ್ಗೆ ಹಣವನ್ನು ತೆಗೆಯುವುದು ದುಬಾರಿಯಾಗಲಿದೆ. ರಿಸರ್ವ್ ಬ್ಯಾಂಕ್ ಗ್ರಾಹಕರಿಗೆ ಇತರೆ ಬ್ಯಾಂಕ್ ಎಟಿಎಂಗಳಿಂದ ತಿಂಗಳಿಂದ ಮೂರು ಬಾರಿ ವಹಿವಾಟು ನಡೆಸಲು ಮತ್ತು  ಗ್ರಾಹಕರ ಬ್ಯಾಂಕ್ ಎಟಿಎಂನಿಂದ 5 ಬಾರಿ ಹಣ ತೆಗೆಯಲು ಮಿತಿಯನ್ನು ಹೇರಿದೆ.

3ಕ್ಕಿಂತ ಹೆಚ್ಚು ಬಾರಿ ಎಟಿಎಂನಿಂದ ಹಣ ತೆಗೆದರೆ ಗ್ರಾಹಕ ಪ್ರತಿಯೊಂದು ವಹಿವಾಟಿಗೆ 20 ರೂ. ಶುಲ್ಕವನ್ನು ತೆರಬೇಕಾಗುತ್ತದೆ. ಇದಕ್ಕೆ ಮುಂಚೆ ಇತರೆ ಬ್ಯಾಂಕ್‌ಗಳಿಂದ 5 ಬಾರಿ ವಹಿವಾಟಿಗೆ ಅನುಮತಿ ನೀಡಲಾಗಿತ್ತು. ಅವರದ್ದೇ ಬ್ಯಾಂಕ್ ಎಟಿಎಂನಿಂದ 5 ವಹಿವಾಟುಗಳ ಮಿತಿಗಿಂತ ಹೆಚ್ಚು ಬಾರಿ ಹಣ ತೆಗೆದರೆ ಗ್ರಾಹಕರಿಗೆ 20 ರೂ. ಶುಲ್ಕ ವಿಧಿಸಲಾಗುತ್ತದೆ.

ಈ ಹೊಸ ಮಾರ್ಗದರ್ಶಕಗಳು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಕೊಲ್ಕತ್ತಾ ಮತ್ತು ಹೈದರಾಬಾದ್‌ನ 6 ಮಹಾನಗರಗಳಲ್ಲಿ ನಾಳೆಯಿಂದ ಜಾರಿಗೆ ಬರಲಿದೆ.

Share this Story:

Follow Webdunia kannada