ಫೋರ್ಡ್ ಇಂಡಿಯಾ ಕಂಪೆನಿ ಮಾರುಕಟ್ಟೆಗೆ ಕಾಂಪಾಕ್ಟ್ ಎಸ್‍ಯುವಿ ಎಕೋಸ್ಫೋರ್ಟ್ಸ್ ಅಪ್‌ಗ್ರೇಡೆಡ್ ಎಡಿಷನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫೋರ್ಡ್ ಎಕೋಸ್ಫೋರ್ಟ್ಸ್ ಪ್ಲಾಟಿನಂ ಎಡಿಷನ್ ಪೆಟ್ರೋಲ್ ಕಾರಿನ ಬೆಲೆ ರೂ.10.39 ಲಕ್ಷ ರೂಪಾಯಿ, ಡೀಸಲ್ ಕಾರಿನ ಬೆಲೆ ರೂ.10.96 (ಎಕ್ಸ್‌ಶೋರೂಂ ದೆಹಲಿ) ಎಂದು ನಿರ್ಧರಿಸಿದೆ.
ಎಕೋಸ್ಫೋರ್ಟ್ಸ್ ಪ್ಲಾಟಿನಂ ಎಡಿಷನ್‌ಗೆ ಎರಡು ಇಂಜಿನ್ ಆಪ್ಷನ್‌ನೊಂದಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದೆ. 1.5 ಡೀಸೆಲ್ ಇಂಜಿನ್‌ನಿಂದ ಕೂಡಿರುವ ಎಕೋಸ್ಫೋರ್ಟ್ಸ್ ಲೀಟರ್‌ಗೆ 22.27 ಕಿ.ಮೀ ಮೈಲೇಜ್ ಕೊಡಲಿದ್ದು 1.01 ಎಕೋ ಬೂಸ್ಟ್ ಪೆಟ್ರೋಲ್ ಇಂಜಿನ್ ಎಸ್‌ಯುವಿ ಲೀಟರ್‌ಗೆ 18.88 ಕಿ.ಮೀ ಮೈಲೇಜ್ ಕೊಡಲಿದೆ ಎಂದು ಕಂಪೆನಿ ತಿಳಿಸಿದೆ.
ಬಳಕೆದಾರರಿಗೆ ಮತ್ತಷ್ಟು ಬೆಲೆಬಾಳುವ ಉತ್ಪನ್ನಗಳನ್ನು ಕೊಡಬೇಕೆಂಬ ಉದ್ದೇಶದಿಂದ ಎಕೋಸ್ಫೋರ್ಟ್ಸ್ ಪ್ಲಾಟಿನಂ ಎಡಿಷನ್ ತಂದಿದ್ದೇವೆ ಎಂದು ಫೋರ್ಡ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಹೋತ್ರಾ ತಿಳಿಸಿದ್ದಾರೆ. ಎಕ್ಸ್‌ಟೀರಿಯರ್ ಡಿಸೈನ್, ಫೀಚರಿಂಗ್ ಬ್ಲಾಕ್ ರೂಫ್, 17 ಇಂಚಿನ ದೊಡ್ಡ ಚಕ್ರಗಳು, ಬ್ರಾಂಡ್ ನ್ಯೂ ಅಲಾಯ್ಸ್ ಜೊತೆಗೆ ಅಗಲವಾದ ಟೈಯರ್‌ಗಳು, ಸ್ಯಾಟಲೈಟ್ ನ್ಯಾವಿಗೇಷನ್ ಜೊತೆಗೆ 8 ಇಂಚಿನ ಟಚ್ ಸರ್ಕಲ್ ಇನ್ಫೋಟೈನ್‍ಮೆಂಟ್ ಸಿಸ್ಟಂಗಳೊಂದಿಗೆ ಅಪ್‍ಗ್ರೇಡೆಡ್ ವೇರಿಯಂಟ್ ತಂದಿರುವುದಾಗಿ ಫೋರ್ಡ್ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.