Select Your Language

Notifications

webdunia
webdunia
webdunia
webdunia

ಐದು ನಗರಗಳಲ್ಲಿ ಆಹಾರ ಡೆಲಿವರಿ ಸೇವೆಯನ್ನು ಆರಂಭಿಸಿದ ಫುಡ್‌ಪಾಂಡಾ

ಐದು ನಗರಗಳಲ್ಲಿ ಆಹಾರ ಡೆಲಿವರಿ ಸೇವೆಯನ್ನು ಆರಂಭಿಸಿದ ಫುಡ್‌ಪಾಂಡಾ
ಮುಂಬೈ , ಶುಕ್ರವಾರ, 17 ಏಪ್ರಿಲ್ 2015 (16:00 IST)
ಆಹಾರ ಪೂರೈಕೆ ಸಂಸ್ಥೆ ಫುಡ್‌ಪಾಂಡಾ  ಭಾರತದ ಐದು ನಗರಗಳಲ್ಲಿ ಆಹಾರ ಪೂರೈಕೆ ಸೇವೆಗಳನ್ನು ಅಧಿಕೃತವಾಗಿ ಆರಂಭಿಸಿದೆ. ಇದರಿಂದಾಗಿ ಬಳಕೆದಾರರು ಆಹಾರಕ್ಕೆ ಆರ್ಡರ್ ಮಾಡಿ ರೆಸ್ಟೊರೆಂಟ್‌ಗಳಿಂದ ಕೂಡ ಡೆಲಿವರಿ ಪಡೆಯಲು ಸಾಧ್ಯವಾಗಿದೆ.  ಫುಡ್ ಪಾಂಡಾ ಡೆಲಿವರಿ ಸೇವೆ ಲಭ್ಯವಿರುವ ಐದು ನಗರಗಳು ಡೆಲ್ಲಿ, ಹೈದರಾಬಾದ್, ಪುಣೆ, ಮುಂಬೈ ಮತ್ತು ಬೆಂಗಳೂರು. 
 
ಮುಂದಿನ 6 ತಿಂಗಳಲ್ಲಿ ಇನ್ನೂ 12 ನಗರಗಳಿಗೆ ಸೇವೆಯನ್ನು ವಿಸ್ತರಿಸಲು ಕಂಪನಿ ಯೋಜಿಸಿದೆ. ನಮ್ಮ ಆಹಾರ ಡೆಲಿವರಿ ಸೇವೆಯು ಗ್ರಾಹಕರಿಗೆ ಮತ್ತು ಡೆಲಿವರಿ ಸೇವೆ ನೀಡದ ರೆಸ್ಟೊರೆಂಟ್‌ಗಳಿಗೆ ಅನುಕೂಲವಾಗುತ್ತದೆ.

ಈ ಸೇವೆಯನ್ನು ಇತ್ತೀಚೆಗೆ ಆರಂಭಿಸಲಾಗಿದ್ದರೂ, ನಾವು ಈಗಾಗಲೇ ಶೇ. 20ರಷ್ಟು ಆರ್ಡರ್ ಸ್ವೀಕರಿಸಿದ್ದು, ಈ ಅಂಕಿಅಂಶವನ್ನು ಶೇ. 60-70ಕ್ಕೆ ಹೆಚ್ಚಿಸುವ ಆಶಯ ಹೊಂದಿದ್ದೇವೆ ಎಂದು ಫುಡ್ ಪಾಂಡಾ ಸಿಇಒ ಸೌರಭ್ ಕೋಚಾರ್ ಹೇಳಿದ್ದಾರೆ. 
 
 

Share this Story:

Follow Webdunia kannada