Select Your Language

Notifications

webdunia
webdunia
webdunia
webdunia

ಸಿಂಗಾಪುರದಲ್ಲಿ ಹಾರುವ ರೊಬೋಟ್‌ಗಳಿಂದ ವೇಟರ್ ಕೆಲಸ

ಸಿಂಗಾಪುರದಲ್ಲಿ ಹಾರುವ ರೊಬೋಟ್‌ಗಳಿಂದ ವೇಟರ್ ಕೆಲಸ
ಸಿಂಗಪುರ , ಗುರುವಾರ, 27 ನವೆಂಬರ್ 2014 (19:58 IST)
ನೀವು ಮುಂದಿನ ವರ್ಷ ಸಿಂಗಪುರಕ್ಕೆ ಭೇಟಿ ನೀಡಲು ಯೋಜಿಸಿದ್ದರೆ, ಹಾರುವ ರೊಬೋಟ್‌ಗಳು ವೇಟರ್‌ಗಳ ರೀತಿಯಲ್ಲಿ ನಿಮಗೆ ಆಹಾರ ಬಡಿಸುವುದನ್ನು ಕಾಣುತ್ತೀರಿ. ಸ್ವಯಂಚಾಲಿತ ಹಾರುವ ರೊಬೋಟ್ ವೇಟರ್‌ಗಳನ್ನು ಸಿಂಗಾಪುರದ ಟಿಂಬರ್ ಗ್ರೂಪ್‌ನ ಐದು ಔಟ್‌ಲೆಟ್ ಪೈಕಿ ಒಂದರಲ್ಲಿ ಮೊದಲಿಗೆ ಆರಂಭಿಸಲಾಗುತ್ತದೆ.

ರೆಸ್ಟೊರೆಂಟ್‌ಗೆ ಭೇಟಿ ನೀಡುವ ಜನರಿಗೆ ಹಾರುವ ರೊಬೋಟ್‌ಗಳು ಸ್ವಾಗತಿಸಿ ಆಹಾರ ಬಡಿಸುತ್ತವೆ ಎಂದು ಚಾನೆಲ್ ಏಷ್ಯಾ ವರದಿ ಮಾಡಿದೆ.ಇನ್ಫಿನಮ್ ರೊಬೋಟಿಕ್ಸ್ ಸಿಇಒ ವೂನ್ ಜುನ್‌ಯಾಂಗ್ ಪ್ರಕಾರ, ಯೋಜನೆ ಐದು ಔಟ್‌ಲೆಟ್‌ಗಳಿಗೆ ಏಳು ಅಂಕಿ ಮೊತ್ತದಷ್ಟು ಕಡಿಮೆ  ವೆಚ್ಚ ತಗಲುತ್ತದೆ.

Share this Story:

Follow Webdunia kannada