Select Your Language

Notifications

webdunia
webdunia
webdunia
webdunia

ಫ್ಲಿಪ್‌ಕಾರ್ಟ್‌ಲ್ಲಿ ಕರಕುಶಲ ಉತ್ಪನ್ನಗಳು!

ಫ್ಲಿಪ್‌ಕಾರ್ಟ್‌ಲ್ಲಿ ಕರಕುಶಲ ಉತ್ಪನ್ನಗಳು!
ಬೆಂಗಳೂರು , ಭಾನುವಾರ, 28 ಡಿಸೆಂಬರ್ 2014 (16:16 IST)
ರಾಜ್ಯದಲ್ಲಿ ಕರಕುಶಲ ವಸ್ತುಗಳ ಮಾರಾಟಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರಕುಶಲ ವಸ್ತುಗಳ ರಫ್ತು ಉತ್ತೇಜನ ಸಮಿತಿ ಮತ್ತು ಕರ್ನಾಟಕ ಸಣ್ಣ ಪ್ರಮಾಣದ ಉದ್ದಿಮೆಗಳ ಒಕ್ಕೂಟದ ಜತೆ ಒಪ್ಪಂದ ಮಾಡಿಕೊಂಡಿರುವುದಾಗಿ ಬೆಂಗಳೂರು ಮೂಲದ ಪ್ರಮುಖ ಇ–ರಿಟೇಲರ್ ‘ಫ್ಲಿಪ್‌ಕಾರ್ಟ್‌’ ತಿಳಿಸಿದೆ.
ಸಂವಾದ ಕಾರ್ಯಕ್ರಮವೊಂದರಲ್ಲಿ  ಮಾತನಾಡುತ್ತಿದ್ದ ಕಂಪೆನಿ ಉಪಾಧ್ಯಕ್ಷ ಅಂಕಿತ್‌ ನಗೋರಿ, ‘ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕರಕುಶಲಕರ್ಮಿಗಳನ್ನು ಕಾಣುತ್ತೇವೆ. ನಮ್ಮ ಈ ಆನ್‌ಲೈನ್‌ ಮಾರುಕಟ್ಟೆ ಬಳಸಿಕೊಂಡು ದೇಶದಾದ್ಯಂತ ಇರುವ ಗ್ರಾಹಕರನ್ನು ತಲುಪುವ ಮೂಲಕ ಅವರು ತಮ್ಮ ವಹಿವಾಟು ವೃದ್ಧಿಸಿಕೊಳ್ಳಬಹುದು ಎಂದರು. 
 
‘ಆನ್‌ಲೈನ್‌ ಮೂಲಕ ವ್ಯಾಪಾರ–ವಹಿವಾಟು ವೃದ್ಧಿಸಿಕೊಳ್ಳುವುದು ಹೇಗೆ?’ ಎಂಬ ವಿಷಯದ ಕುರಿತಾಗಿ, ಚಿನ್ನಾಭರಣ, ಗೃಹ ಅಲಂಕಾರ, ಪೀಠೋಪಕರಣ, ಚಪ್ಪಲಿ ಮತ್ತು ಎಲೆಕ್ಟ್ರಾನಿಕ್ಸ್‌ ಸೇರಿದಂತೆ 120ಕ್ಕೂ ಹೆಚ್ಚಿನ ಕರಕುಶಲ ವಸ್ತುಗಳ ಮಾರಾಟಗಾರರ ಜತೆ ಅವರು ಸಂವಾದ ನಡೆಸಿದರು.
 
ಪುಸ್ತಕಗಳು, ಮಾಧ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಜೀವನಶೈಲಿ ಐಟಂಗಳನ್ನು ಸೇರಿದಂತೆ 70 ವಿಧದ, 20 ದಶಲಕ್ಷ ಉತ್ಪನ್ನಗಳನ್ನು  ಫ್ಲಿಪ್‌ಕಾರ್ಟ್‌ ‘ಆನ್‌ಲೈನ್‌' ಮೂಲಕ ಒದಗಿಸುತ್ತದೆ.
 
ತಿಂಗಳಿಗೆ ಐದು ದಶಲಕ್ಷ ಸಾಗಣೆಗಳನ್ನು ( ದೇಶಾದ್ಯಂತ) ಕಂಪನಿ ಮಾಡುತ್ತದೆ. 

Share this Story:

Follow Webdunia kannada