Select Your Language

Notifications

webdunia
webdunia
webdunia
webdunia

ನೋಕಿಯಾ ಸ್ಮಾರ್ಟ್‌ಫೋನ್ ಬಂದೇ ಬಿಟ್ಟಿದೆ

ನೋಕಿಯಾ ಸ್ಮಾರ್ಟ್‌ಫೋನ್ ಬಂದೇ ಬಿಟ್ಟಿದೆ
New Delhi , ಸೋಮವಾರ, 9 ಜನವರಿ 2017 (09:04 IST)
ಸಾಕಷ್ಟು ಅಭಿಮಾನಿಗಳು ಎದುರು ನೋಡುತ್ತಿದ್ದ ನೋಕಿಯಾ ಬ್ರ್ಯಾಂಡ್ ಸ್ಮಾರ್ಟ್‍ಫೋನ್ ಮಾರುಕಟ್ಟೆಗೆ ಬಂದೇ ಬಿಟ್ಟಿದೆ. ಫಿನ್‌ಲ್ಯಾಂಡ್‍ ಮೂಲದ ನೋಕಿಯಾ ಮೊಬೈಲ್ ತಯಾರಿಕಾ ಸಂಸ್ಥೆ ಎಚ್‍ಎಂಡಿ ಗ್ಲೋಬಲ್ ಈ ಫೋನನ್ನು ಬಿಡುಗಡೆ ಮಾಡಿದೆ. 
 
ನೋಕಿಯಾ 6 ಹೆಸರಿನ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ಮಾಡಲಿದೆ. ಆಂಡ್ರಾಯ್ಡ್ ಓಎಸ್‍ನೊಂದಿಗೆ ಬರುತ್ತಿರುವ ಮೊದಲ ನೋಕಿಯಾ ಸ್ಮಾರ್ಟ್‌ಫೋನ್ ಇದು. ಆದರೆ ಈ ಫೋನ್ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಭ್ಯ ಎಂದು ಎಚ್‌ಎಂಡಿ ಗ್ಲೋಬಲ್ ತಿಳಿಸಿದೆ. 5.5 ಇಂಚಿನ ಎಚ್‍ಡಿ ಡಿಸ್‌ಪ್ಲೇ ಇರುವ ನೋಕಿಯಾ 6 ಬೆಲೆ ಚೀನಾದಲ್ಲಿ 1,699 ಯುವಾನ್‌ (ರೂ.16,768).
 
ನೋಕಿಯಾ 6 ಫೋನ್ ವಿಶೇಷಗಳು
* ಓಎಸ್: ಆಂಡ್ರಾಯ್ಡ್ ನೋಗಟ್ 7.0
* ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್
* 4ಜಿಬಿ ರ್ಯಾಮ್
* 64 ಜಿಬಿ ಇಂಟರ್‌ನಲ್ ಮೆಮೊರಿ. ಮೈಕ್ರೋ ಎಸ್‌ಡಿ ಕಾರ್ಡ್ ಸೌಲಭ್ಯ ಇದೆ.
* ಹಿಂಬದಿ 16 ಮೆಗಾ ಪಿಕ್ಸೆಲ್, ಮುಂಬದಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ
* ಬ್ಯಾಟರಿ ಸಾಮರ್ಥ್ಯ 3000 ಎಂಎಎಚ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐವತ್ತು ಸಾವಿರ ಫೋಕ್ಸ್ ವ್ಯಾಗನ್ ಕಾರುಗಳು ಹಿಂದಕ್ಕೆ