Select Your Language

Notifications

webdunia
webdunia
webdunia
webdunia

ಆನ್‌ಲೈನ್ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರಿಂದ ಫೇಸ್‌ಬುಕ್ ಬಳಕೆ

ಆನ್‌ಲೈನ್ ಜನಸಂಖ್ಯೆಯಲ್ಲಿ  ಅರ್ಧದಷ್ಟು ಜನರಿಂದ ಫೇಸ್‌ಬುಕ್ ಬಳಕೆ
ಲಂಡನ್ , ಗುರುವಾರ, 30 ಜುಲೈ 2015 (18:45 IST)
ಜಗತ್ತಿನ ಅರ್ಧದಷ್ಟು ಆನ್‌ಲೈನ್ ಬಳಕೆದಾರರು ತಿಂಗಳಿಗೆ ಒಮ್ಮೆಯಾದರೂ ಫೇಸ್‌ಬುಕ್‌ಗೆ ಲಾಗಾನ್ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣ ಫೇಸ್‌‍ಬುಕ್ ಹೇಳಿಕೊಂಡಿದೆ. ಕಂಪನಿಯ ಪ್ರಕಾರ, ತಿಂಗಳಿಗೆ ಒಂದು ಬಾರಿಯಾದರೂ ಫೇಸ್‌ಬುಕ್ ಬಳಸುವ ಜನರ ಸಂಖ್ಯೆ ಶೇ. 13ರಷ್ಟು ಹೆಚ್ಚಾಗಿ 1.49 ಶತಕೋಟಿಗೆ ಮುಟ್ಟಿದೆ.  ಅಂತರ್ಜಾಲವನ್ನು ಜಗತ್ತಿನಲ್ಲಿ ಬಳಸುವ ಮೂರು ಶತಕೋಟಿ ಜನರ ಪೈಕಿ ಈ ಸಂಖ್ಯೆಯು ಅರ್ಧದಷ್ಟಿದೆ. 
 
ಆ ಬಳಕೆದಾರರ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ಅಂದರೆ ಶೇ. 65ರಷ್ಟು ಜನರು ಸಾಮಾಜಿಕ ಜಾಲತಾಣವನ್ನು ದಿನನಿತ್ಯವೂ ಲಾಗ್ ಆನ್ ಮಾಡುತ್ತಾರೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ. 
 
ಜನರು ಈಗ ಸ್ಮಾರ್ಟ್ ಫೋನ್‌ಗಳಲ್ಲಿ ಕಳೆಯುವ  ಪ್ರತಿ ಐದು ನಿಮಿಷಗಳಲ್ಲಿ ಒಂದು ನಿಮಿಷವನ್ನು ಫೇಸ್‌ಬುಕ್‌ಗೆ ವಿನಿಯೋಗಿಸುತ್ತಾರೆ ಎಂದು ಕಂಪನಿ ಹೇಳಿದೆ.  ಮಾಸಿಕ ಬಳಕೆದಾರರು ಮೊಬೈಲ್ ಉಪಕರಣಗಳ ಮೂಲಕ ಫೇಸ್‌ಬುಕ್ ಪ್ರವೇಶಿಸುತ್ತಾರೆ ಎಂದು ಅದು ಹೇಳಿದೆ. 
 
ಮಾಸಿಕ ಸಕ್ರಿಯ ಬಳಕೆದಾರರ ಹೆಚ್ಚಳದಿಂದ ಎರಡು ತ್ರೈಮಾಸಿಕದ ಆದಾಯವು ಶೇ. 39ರಷ್ಟು ಹೆಚ್ಚಾಗಿದ್ದು, 4.04 ಶತಕೋಟಿ ಡಾಲರ್‌ಗೆ ಮುಟ್ಟಿದೆ ಎಂದು ವರದಿ ತಿಳಿಸಿದೆ.  ಮೊಬೈಲ್ ಜಾಹಿರಾತು ಆದಾಯವು ದೊಡ್ಡ ಅಂಶವಾಗಿದ್ದು, ಒಟ್ಟು ಮೊತ್ತದ ಮೂರನೇ ಒಂದರಷ್ಟು ಭಾಗವಾಗಿದೆ. 

Share this Story:

Follow Webdunia kannada