Webdunia - Bharat's app for daily news and videos

Install App

ಪ್ರತಿ ಬ್ಯಾಂಕ್‌ನಲ್ಲಿ ಪ್ರತ್ಯೇಕ ವೇತನ ನಿಗದಿ: ಹೊಸ ವ್ಯವಸ್ಥೆಗೆ ಚಿಂತನೆ

Webdunia
ಸೋಮವಾರ, 30 ಮಾರ್ಚ್ 2015 (11:06 IST)
ಈಗತಾನೇ ಮುಗಿದಿರುವ ಬ್ಯಾಂಕ್ ನೌಕರರ ವೇತನ ಇತ್ಯರ್ಥ ಒಪ್ಪಂದವು ಕೊನೆಯ ಚಟುವಟಿಕೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸರ್ಕಾರ  ಹೊಸ ವ್ಯವಸ್ಥೆಗೆ ಹೋಗುವ ವಿಷಯದ ಬಗ್ಗೆ ಆರಂಭಿಕ ಮಾತುಕತೆ ನಡೆಸಿವೆ. ಈ ವ್ಯವಸ್ಥೆಯಡಿ ಪ್ರತಿಯೊಂದು ಬ್ಯಾಂಕ್ ತನ್ನದೇ ವೇತನ ರಚನೆಯನ್ನು ತೀರ್ಮಾನಿಸಿ ಏಕಕಾಲದಲ್ಲಿ ಕಂಪನಿಗಾಗುವ ವೆಚ್ಚದ ವ್ಯವಸ್ಥೆ ಮೇಲೆ ವೇತನ ರಚನೆ ಮಾಡಲು ನಿರ್ಧರಿಸಿವೆ.

ಕಾರ್ಪೊರೇಟ್ ವಲಯದಲ್ಲಿ ಇದೇ ನಿಯಮವನ್ನು ಅನುಸರಿಸಲಾಗುತ್ತದೆ. ಕೈಗಾರಿಕೆ ಮಟ್ಟದ ವೇತನ ಇತ್ಯರ್ಥ ಹಿಂದಿನ ಪಳೆಯುಳಿಕೆಯಾಗಿದ್ದು, ಸಣ್ಣ ಮತ್ತು ಕಡಿಮೆ ದಕ್ಷತೆಯ ಬ್ಯಾಂಕ್‌‍ಗಳ ಮೇಲೆ ಒತ್ತಡವನ್ನು ಹೇರುತ್ತವೆ. ಉತ್ತಮ ನಿರ್ವಹಣೆಯ ಬ್ಯಾಂಕ್‌ಗಳು ಪ್ರತಿಭಾಶಾಲಿಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಮೊಟಕು ಮಾಡುತ್ತದೆ. 
ಬ್ಯಾಂಕ್‌ಗಳು ಮತ್ತು ನೌಕರರ ಒಕ್ಕೂಟವು ಶೇ. 15ರಷ್ಟು ವೇತನಕ್ಕೆ ಒಪ್ಪಿಗೆ ಸೂಚಿಸಿದ್ದು, ವಾರ್ಷಿಕವಾಗಿ 5000 ಕೋಟಿ ರೂ. ಹೊರೆ ಬ್ಯಾಂಕ್‌ಗಳ ಮೇಲೆ ಬೀಳುತ್ತದೆ.

ಇದರ ಫಲವಾಗಿ ನಷ್ಟ ಎದುರಿಸುತ್ತಿರುವ ಬ್ಯಾಂಕ್‌ಗಳು ಕೂಡ ಈ ಹೊರೆಯನ್ನು ಹೊರಬೇಕಾಗಿದೆ.  ಮುಂದಿನ ವೇತನ ಇತ್ಯರ್ಥ 2017 ನವೆಂಬರ್‌ನಲ್ಲಿ ಬಾಕಿ ಉಳಿದಿರುವುದರಿಂದ ಬ್ಯಾಂಕರ್‌ಗಳು ರೂಪಿಸಿದ ನೀಲನಕ್ಷೆಯ ಪ್ರಕಾರ ಮುಂದಿನ ವರ್ಷ ಕೈಗಾರಿಕೆ ಮಟ್ಟದ ವೇತನವನ್ನು ಕೈಬಿಟ್ಟು ಉತ್ಪಾದನೆ ಆಧಾರಿತ ವೇತನ ನಿಗದಿಯ ಪ್ರಕ್ರಿಯೆಯನ್ನು ಆರಂಭಿಸುವ ಸಾಧ್ಯತೆಯಿದೆ. ಇದು ಕಂಪೆನಿಗಾಗುವ ವೆಚ್ಚವನ್ನು ಆಧರಿಸಿದ್ದು, ಪ್ರತಿಯೊಂದು ಬ್ಯಾಂಕ್ ವೇತನದ ಸಾಮರ್ಥ್ಯವನ್ನು ಆಧರಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments