Select Your Language

Notifications

webdunia
webdunia
webdunia
webdunia

ಫೇಸ್‌ಬುಕ್‌ನಲ್ಲಿ ಹೊಸ ವಿಶೇಷತೆಗಳು ಅಳಡಿಸಿರುವುದು ನಿಮಗೆ ತಿಳಿದಿದೆಯೇ?

ಫೇಸ್‌ಬುಕ್‌ನಲ್ಲಿ ಹೊಸ ವಿಶೇಷತೆಗಳು ಅಳಡಿಸಿರುವುದು ನಿಮಗೆ ತಿಳಿದಿದೆಯೇ?
ನವದೆಹಲಿ , ಬುಧವಾರ, 13 ಏಪ್ರಿಲ್ 2016 (14:45 IST)
ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್ ಸಂಸ್ಥೆ, ತನ್ನ ಬಳಕೆದಾರರನ್ನು ಯಾವ ರೀತಿ ಸಂತೋಷಗೊಳಿಸಬೇಕು ಎನ್ನುದನ್ನು ಉತ್ತಮವಾಗಿ ತಿಳಿದಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ತನ್ನ ಬಳಕೆದಾರರಿಗೆ ಫೇಸ್‌ಬುಕ್ ವೆಬ್‌ಸೈಟ್ ಮತ್ತು ಮೆಸೆಂಜರ್ ಆಪ್‌ನಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ಸೇರಿಸಿದೆ.
ಫೇಸ್‌ಬುಕ್ ಮತ್ತು ಮೆಸೆಂಜರ್‌ನಲ್ಲಿನ ಅಳವಡಿಸಲಾದ ಹೊಸ ವೈಶಿಷ್ಟ್ಯಗಳು ಇಲ್ಲಿವೆ.
 
ಮೆಸೆಂಜರ್ ಕೋಡ್ಸ್
ಫೇಸ್‌ಬುಕ್ ಮೆಸೆಂಜರ್ ಆಪ್‌ಗಳಲ್ಲಿ ಮೆಸೆಂಜರ್ ಕೋಡ್‌ ವೈಶಿಷ್ಟ್ಯವನ್ನು ಸೇರಿಸಿದೆ. ಈ ವೈಶಿಷ್ಟ್ಯದಿಂದ ಬಳಕೆದಾರರು, ಸಂಭಾಷಣೆಗಾಗಿ ನಡೆಸಲು ಹೊಸ ಬಳಕೆದಾರರನ್ನು ಅವರು ನೀಡುವ ಕೋಡ್ ಮುಖಾಂತರ  ಸರಳವಾಗಿ ಹುಡುಕಾಟ ನಡೆಸಬಹುದಾಗಿದೆ.
 
ಅಟೋ ಕ್ಯಾಪ್ಶ್‌ನಿಂಗ್ ಫಾರ್ ವಿಡಿಯೋ ಆಡ್ಸ್ 
ಫೇಸ್‌ಬುಕ್ ಧ್ವನಿರಹಿತ ವಿಡಿಯೋಗಳಿಗೆ ಸ್ವಯಂಚಾಲಿತ ಕ್ಯಾಪ್ಶನ್‌ ಪರಿಚಯಿಸಿದೆ. ಹೊಸ ಉಪಕರಣ ಅಳವಡಿಕೆಯಿಂದಾಗಿ ವಿಡಿಯೋ ಜಾಹೀರಾತು ಕ್ಯಾಪ್ಶನ್‌ಗಳು ಸ್ವಂಯಚಾಲಿತವಾಗಿ ಕಾಣಿಸುವುದಲ್ಲದೇ ಜಾಹೀರಾತುದಾರರಿಗೆ ಕೆಲವೆ ಸೆಕೆಂಡ್ಸ್‌ಗಳಲ್ಲಿ ರವಾನಿಸುವುದಲ್ಲದೇ ವಿಡಿಯೋ ಸಂಗ್ರಹಿಸಿಡುತ್ತದೆ.  
 
ಫೇಸ್‌ಬುಕ್ ಲೈವ್
ಪ್ರಸಕ್ತ ವರ್ಷ, ಸಾಮಾಜಿಕ ಜಾಲತಾಣಗಳಲ್ಲಿ ಫೇಸ್‌ಬುಕ್ ಲೈವ್ ವೈಶಿಷ್ಟ್ಯವನ್ನು ಸೇರಿಸಿದ್ದು, ಈ ವೈಶಿಷ್ಟ್ಯದಿಂದ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ದೊರೆತ ಸಮಯದಲ್ಲಿ ಲೈವ್ ವಿಡಿಯೋ ವಿಕ್ಷೀಸಲು ಆಹ್ವಾನ ನೀಡಬಹುದಾಗಿದೆ.

Share this Story:

Follow Webdunia kannada