ನೋಟು ನಿಷೇಧದಿಂದ ಸ್ಮಾರ್ಟ್‌ಫೋನ್ ಮಾರಾಟ ಕುಸಿತ

Webdunia
ಬುಧವಾರ, 25 ಜನವರಿ 2017 (11:16 IST)
ಅಧಿಕ ಮೌಲ್ಯದ ನೋಟು ನಿಷೇಧದಿಂದ ಸ್ಮಾರ್ಟ್‍ಫೋನ್ ಮಾರುಕಟ್ಟೆಗೆ ಭಾರಿ ಹೊಡೆತ ನೀಡಿದೆ. ಕಳೆದ ವರ್ಷ ನಡೆದ ನೊಟು ನಿಷೇಧದ ಪ್ರಭಾವದಿಂದ ಫೋನ್ ಮಾರಾಟ ಕುಸಿದಿದೆ ಎಂದು ಅಂತಾರಾಷ್ಟ್ರೀಯ ಡಾಟಾ ಕಾರ್ಪೊರೇಷನ್ (ಐಡಿಸಿ) ಮಂಗಳವಾರ ಹೇಳಿದೆ.
 
ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಶೇ.30.5ರಷ್ಟು ಕುಸಿತ ಕಂಡಿದೆ ಎಂದು ಐಡಿಸಿ ತಿಳಿಸಿದೆ. ಭಾರತದಲ್ಲಿ 50 ಪ್ರಮುಖ ನಗರಗಳಲ್ಲಿ ಐಡಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. ನೋಟು ನಿಷೇಧ ಭಾರತೀಯ ಕಂಪೆನಿಗಳ ಮೇಲೆ ಹೆಚ್ಚಾಗಿ ಬಿದ್ದಿದೆ ಎಂದಿದೆ.
 
ಭಾರತೀಯ ಕಂಪೆನಿಗಳ ಫೋನ್ ಮಾರಾಟ ಶೇ.37.2ರಷ್ಟು ಕುಸಿದಿದ್ದು, ಚೀನಾ ಕಂಪೆನಿ ಫೋನ್ ಮಾರಾಟದಲ್ಲಿ ಶೇ.26ರಷ್ಟು ಕಡಿಮೆಯಾಗಿದೆ. ಅಂತಾರಾಷ್ಟೀಯ ಕಂಪೆಇಗಳ ಫೋನ್ ಮಾರಾಟ ಶೇ.30.5ರಷ್ಟು ಕಡಿಮೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. 
 
ಅದೇ ರೀತಿ ಭಾರತದ ಮೊದಲ ಗ್ರೇಡ್ ನಗರಗಳಲ್ಲಿ ಶೇ.31.7ರಷ್ಟು ಮಾರಾಟ ಕುಸಿತ ಕಂಡಿದ್ದು, ಎರಡು, ಮೂರು, ನಾಲ್ಕು ಗ್ರೇಡ್ ನಗರಗಳಲ್ಲಿ ಶೇ.29.5ರಷ್ಟು ಮಾರಾಟ ಕಡಿಮೆಯಾಗಿದೆ ಎಂದು ಐಡಿಸಿ ಬಹಿರಂಗಪಡಿಸಿದೆ. ಕಳೆದ ವರ್ಷ ನವೆಂಬರ್ 8ರಂದು ಪ್ರಧಾನಿ ಮೋದಿ ರೂ.500, ರೂ.1000 ನೋಟುಗಳನ್ನು ನಿಷೇಧಿಸಿದ್ದು ಗೊತ್ತೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಂಜಯ್ ಸರೋಗಿ ಹೆಗಲಿಗೆ

ಮದ್ಯಪಾನ ಪಾರ್ಟಿ ವೇಳೆ ಜಗಳ, ಒಬ್ಬನ ಹತ್ಯೆಯಲ್ಲಿ ಅಂತ್ಯ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್

ಮೂರು ರಾಷ್ಟ್ರಗಳ ಪ್ರವಾಸ: ಅಮ್ಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ

ದೆಹಲಿ ದಟ್ಟ ಹೊಗೆ, ಮಂಜು: ಇಂದು 40 ವಿಮಾನಗಳು ರದ್ದು

ಮುಂದಿನ ಸುದ್ದಿ
Show comments