Select Your Language

Notifications

webdunia
webdunia
webdunia
webdunia

ನೋಟು ನಿಷೇಧ: ಶೇ.50 ರಷ್ಟು ದಂಡದೊಂದಿಗೆ ಕಪ್ಪು ಹಣ ಪಾವತಿಸಿ ಎಂದ ಕೇಂದ್ರ ಸರಕಾರ

ನೋಟು ನಿಷೇಧ: ಶೇ.50 ರಷ್ಟು ದಂಡದೊಂದಿಗೆ ಕಪ್ಪು ಹಣ ಪಾವತಿಸಿ ಎಂದ ಕೇಂದ್ರ ಸರಕಾರ
ನವದೆಹಲಿ , ಸೋಮವಾರ, 28 ನವೆಂಬರ್ 2016 (19:56 IST)
ಕಪ್ಪು ಹಣ ಹೊಂದಿದವರಿಗೆ ಕೇಂದ್ರ ಸರಕಾರ ಮತ್ತೊಂದು ಅವಕಾಶ ನೀಡಿದೆ. ಕಪ್ಪು ಹಣ ಹೊಂದಿದವರು ಶೇ.50 ರಷ್ಟು ದಂಡವನ್ನು ಪಾವತಿಸಿ ತಮ್ಮ ಕಪ್ಪು ಹಣವನ್ನು ವೈಟ್ ಹಣವನ್ನಾಗಿ ಪರಿವರ್ತಿಸಬಹುದು.. ಒಂದು ವೇಳೆ ಕಪ್ಪು ಹಣ ಹೊಂದಿದವರು ಕಾನೂನಿನ ಕೈಗೆ ಸಿಲುಕಿದಲ್ಲಿ ಶೇ.85 ರಷ್ಟು ಹಣವನ್ನು ದಂಡವಾಗಿ ಭರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 
 
ಕೇಂದ್ರ ಸರಕಾರ 500 ಮತ್ತು 1000 ರೂ. ನೋಟು ನಿಷೇಧ ಜಾರಿಗೊಳಿಸಿದ ಮೂರು ವಾರಗಳ ನಂತರ ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ, ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
500 ಮತ್ತು 1000 ರೂ ನೋಟುಗಳ ಕಪ್ಪು ಹಣ ಹೊಂದಿದವರು ತಮ್ಮ ಹಣವನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ 2016ರ ಖಾತೆಗೆ ಜಮೆ ಮಾಡಬಹುದಾಗಿದೆ.ಆದರೆ, ಶೇ.30 ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಸಿಎಂ ಸಿದ್ದರಾಮಯ್ಯ