Select Your Language

Notifications

webdunia
webdunia
webdunia
webdunia

ಪೋಲಿಸರು ಹುಡುಕಿ ಕೊಡುತ್ತಾರೆ ನಿಮ್ಮ ಕಳುವಾದ ಮೊಬೈಲ್‌ನ್ನಾ

ಪೋಲಿಸರು ಹುಡುಕಿ ಕೊಡುತ್ತಾರೆ ನಿಮ್ಮ ಕಳುವಾದ ಮೊಬೈಲ್‌ನ್ನಾ
, ಶನಿವಾರ, 26 ಜುಲೈ 2014 (15:49 IST)
ನೀವು ನಿಮ್ಮ ಮೊಬೈಲ್ ಪೋನ್‌ನ್ನು ಕಳೆದುಕೊಂಡಿದ್ದೀರಾ? ನಿಮ್ಮ ಸಿಮ್‌ನ್ನಷ್ಟೇ ಬ್ಲಾಕ್ ಮಾಡಿ ಸುಮ್ಮನೆ ಕೂರಬೇಡಿ. ಸಮೀಪದ ಪೋಲಿಸ್ ಠಾಣೆಗೆ ಹೋಗಿ ನೀವು ಮೊಬೈಲ್ ಕಳೆದುಕೊಂಡಿರುವುದಾಗಿ ಪೋಲಿಸರಲ್ಲಿ ದೂರು ನೀಡಿ. ಕೇವಲ ದೂರನ್ನು ದಾಖಲಿಸಿಕೊಳ್ಳುವುದು ಅಷ್ಟೇ ಅವರ ಕೆಲಸವಲ್ಲ. ಮೊಬೈಲ್ ಪತ್ತೆಹಚ್ಚಲು ಸಹ ಕಾರ್ಯಾಚರಣೆ ಮಾಡುತ್ತಾರೆ. 

 
ಕಳುವಾದ ಮೊಬೈಲ್ ಫೋನ್‌ಗಳಿಂದ ಭದ್ರತಾ ಬೆದರಿಕೆಯನ್ನು ಪರಿಗಣಿಸಿ, ವಿಭಾಗ 154 ಅಡಿಯಲ್ಲಿ ಎಫ್ಐಆರ್ ಕಡ್ಡಾಯ ನೋಂದಣಿ ಮಾಡಬೇಕೆಂಬ ಕಾನೂನು ಫೆಬ್ರವರಿ 5, 2014 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ.  
 
ಇತ್ತೀಚಿನವರೆಗೆ ಪೋಲಿಸರು ಮೊಬೈಲ್ ಫೋನ್ ಕಳುವಾದ ಬಗ್ಗೆ ದೂರು  ದಾಖಲಿಸಿಕೊಳ್ಳಲು ಸಹ ಸಹಕರಿಸುತ್ತಿರಲಿಲ್ಲ. ಆದರೆ, ರಾಷ್ಟ್ರೀಯ ಮೊಬೈಲ್ ಪ್ರೊಪರ್ಟಿ ರಿಜಿಸ್ಟ್ರಿ, ರಾಷ್ಟ್ರೀಯ ಟೆಲಿಕಾಂ ನೀತಿಯನ್ನು  ಅಸ್ತಿತ್ವಕ್ಕೆ ತಂದ ನಂತರ ಭದ್ರತೆ, ಕಳ್ಳತನ ಮತ್ತು ಮೊಬೈಲ್ ಹ್ಯಾಂಡ್‌ಸೆಟ್‌ಗಳ ರಿಪ್ರೋಗ್ರಾಮಿಂಗ್ ಸೇರಿದಂತೆ ಮೊಬೈಲ್‌ಗೆ ಸಂಬಂಧಿಸಿದ ಪ್ರಕರಣಗಳ ನೊಂದಣಿಯ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ದೆಹಲಿಯಲ್ಲಿ 2011 ರಲ್ಲಿ ದಾಖಲಾದ ಮೊಬೈಲ್ ಕಳುವಿನ ಪ್ರಕರಣಗಳು 1123, ಆದರೆ ಈ ವರ್ಷದ ಮಟ್ಟಿಗೆ ಹೇಳುವುದಾದರೆ ಜೂನ್ 30, 2014 ವರೆಗೆ ದಾಖಲಾದ ಮೊಬೈಲ್ ಕಳವು ಪ್ರಕರಣಗಳು ಸಂಖ್ಯೆ 7159 .
 
ಈ ಕುರಿತು ಜೀ ರಿಸರ್ಚ್ ಗ್ರುಪ್ ಜತೆ ಮಾತನಾಡುತ್ತಿದ್ದ ದೆಹಲಿ ಪೋಲಿಸ್ ವಕ್ತಾರ ರಾಜಾ ಭಗತ್,  ಇತರ ಕ್ರಿಮಿನಲ್ ಪ್ರಕರಣಗಳಿಗೆ ಕೊಟ್ಟ ಮಹತ್ವವನ್ನು ಮೊಬೈಲ್ ಫೋನ್ ಕಳುವು ಪ್ರಕರಣಗಳಿಗೆ ನೀಡಲಾಗುವುದು. ಕಳುವಾದ ಫೋನನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ತಮ್ಮಿಂದಾದಷ್ಟು ಪ್ರಯತ್ನ ಮಾಡಲಿದ್ದಾರೆ. ನಮ್ಮ ತಂಡ ಇಂತಹ ಅನೇಕ ಪ್ರಕರಣಗಳನ್ನು ಬಗೆಹರಿಸಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada