Select Your Language

Notifications

webdunia
webdunia
webdunia
webdunia

ಪ್ರಾದೇಶಿಕ ಕ್ಷೇತ್ರಗಳಿಗೆ ವಿಮಾನಯಾನ ಸೌಲಭ್ಯ ವಿಸ್ತರಿಸಲು ಚಿಂತನೆ

ಪ್ರಾದೇಶಿಕ ಕ್ಷೇತ್ರಗಳಿಗೆ ವಿಮಾನಯಾನ ಸೌಲಭ್ಯ ವಿಸ್ತರಿಸಲು ಚಿಂತನೆ
ನವದೆಹಲಿ , ಶನಿವಾರ, 2 ಜುಲೈ 2016 (16:25 IST)
ಪ್ರಾದೇಶಿಕ ಕ್ಷೇತ್ರಗಳನ್ನು ಗುರುತಿಸಿ ವಿಮಾನಯಾನ ಸೌಲಭ್ಯ ಒದಗಿಸುವ ಕುರಿತಂತೆ ಕೇಂದ್ರ ವಿಮಾನಯಾನ ಸಚಿವಾಲಯ ಯೋಜನೆ ಸಿದ್ದಪಡಿಸಿ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
 
ಈ ಯೋಜನೆ ಅನುಷ್ಠಾನಕ್ಕೆ ಬಂದರೇ, ಪ್ರಯಾಣಿಕರು 2500 ರೂಪಾಯಿ ದರದಲ್ಲಿ 500 ಕಿಲೋಮೀಟರ್‌ ದೂರದ ಪ್ರಯಾಣವನ್ನು ಕೇವಲ ಒಂದು ಗಂಟೆಯಲ್ಲಿ ತಲುಪಬಹುದಾಗಿದೆ. ಸಂಸ್ಥೆ ನಿಗದಿ ಪಡಿಸಿರುವ ದರದಲ್ಲಿ ಯಾವುದೆ ಸೇವಾ ಶುಲ್ಕ ಮತ್ತು ಬಳಕೆದಾರ ಅಭಿವೃದ್ಧಿ ಶುಲ್ಕ ಅನ್ವಯವಾಗುವುದಿಲ್ಲ.
 
ಆದಾಗ್ಯೂ, ಸೀಮಿತ ಸಂಖ್ಯೆಯ ಆಸನಗಳಿಗೆ ಮಾತ್ರ ಮೀಸಲಾಗಿರಿಸಲಾಗಿದ್ದು, ಮೊದಲ ಬಂದವರಿಗೆ ಆದ್ಯತೆಯ ಮೇರೆಗೆ ಪ್ರಯಾಣಿಕರು ಸಬ್ಸಿಡಿ ಪ್ರಯಾಣ ದರವನ್ನು ಪಡೆಯಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ. 
 
ವಿಮಾನ ದರಗಳನ್ನು 1,700 ರೂಪಾಯಿಗಳಿಂದ 4,070 ರೂಪಾಯಿಗಳಿಗೆ ನಿಗದಿಪಡಿಸಿದ್ದು, ಈ ದರಗಳನ್ನು ಚಾಲ್ತಿಯಲ್ಲಿರುವ ಹಣದುಬ್ಬರ ದರದ ಆಧಾರದ ಮೇಲೆ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕೃತಗೊಳಿಸಲಾಗುತ್ತದೆ.
 
ಅವುಗಳಲ್ಲಿ ಕೆಲವು ಹೀಗಿವೆ, ಆಗ್ರಾ, ಅಲಹಾಬಾದ್, ಪಂತ್‌ನಗರ, ಡಿಯು, ಶಿಲ್ಲಾಂಗ್, ಜಾಮ್ನಗರ್, ಭಾವನಗರ್, ಕುಲ್ಲು ಮತ್ತು ತೇಜ್ಪುರ್ ವಿಮಾನ ನಿಲ್ದಾಣಗಳು ಸೇರಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಪಿರೈಟ್: ಆಪಲ್ ವಿರುದ್ಧ 10 ಬಿಲಿಯನ್ ಡಾಲರ್ ದಾವೆ ಹೂಡಿದ ಉದ್ಯಮಿ