Select Your Language

Notifications

webdunia
webdunia
webdunia
webdunia

ರೈಲ್ವೆ ಟಿಕೆಟ್‌‌ ಕನ್ಫರ್ಮ್‌‌ ಆಗುತ್ತದೆಯೋ ಇಲ್ಲವೋ ಎಂದು ತಿಳಿಸುತ್ತದೆ ಈ ವೆಬ್‌‌ಸೈಟ್‌‌

ರೈಲ್ವೆ ಟಿಕೆಟ್‌‌ ಕನ್ಫರ್ಮ್‌‌ ಆಗುತ್ತದೆಯೋ ಇಲ್ಲವೋ ಎಂದು ತಿಳಿಸುತ್ತದೆ ಈ ವೆಬ್‌‌ಸೈಟ್‌‌
ನವದೆಹಲಿ , ಶನಿವಾರ, 23 ಆಗಸ್ಟ್ 2014 (16:54 IST)
ನೀವು ಟ್ರೇನ್ ಟಿಕೆಟ್‌ ಪಡೆದುಕೊಳ್ಳಲು ಹೋದಾಗ ನಿಮ್ಮ ಎಲ್ಲಾ ಸೀಟುಗಳು ರಿಸರ್ವ್‌‌ ಆಗಿವೆ ಮತ್ತು ವೇಟಿಂಗ್‌ ಲಿಸ್ಟ್ ಇರುವುದು ಗೊತ್ತಾಗುತ್ತದೆ. ಆದರೆ ಇದರಲ್ಲಿ ಕೂಡ ನಿಮ್ಮ ಟಿಕೆಟ್‌ ಕನ್ಫರ್ಮ್‌‌ ಆಗುತ್ತದೆಯೇ ಇಲ್ಲವೋ ಎಂದು ಗೊತ್ತಾಗುವುದಿಲ್ಲ. ಈ ಕನ್ಪರ್ಮೆಶನ್‌‌ಗಾಗಿ ರೈಲು ಹೊರಡುವ ಮೂರು ಗಂಟೆ ಮೊದಲು ಕಾಯುತ್ತ ಕೂಡಬೇಕಾಗುತ್ತದೆ. ನಿಮ್ಮ ಟಿಕೆಟ್‌ ಕನ್ಪರ್ಮ್‌‌ ಆಗುತ್ತದೆಯೋ ಇಲ್ಲವೋ ಎಂದು ನಿಮಗೆ ತಿಳಿಸುವುದು ಕಷ್ಟವಾಗುತ್ತದೆ. ಆದರೆ, ನಿಮ್ಮ ಈ ಸಮಸ್ಯೆಗೆ ಕೂಡ ಒಂದು ಪರಿಹಾರವಿದೆ. ಅದೇನೆಂದು ತಿಳಿಯಲು ಮುಂದೆ ಓದಿ.  
 
ವೇಟಿಂಗ್‌‌ಗಾಗಿ ಕಾಯುವ ಬದಲು ನಿಮಗೆ ಸಮಾಧಾನ ನೀಡುವ www.confirmtkt.com  ವೆಬ್‌‌ಸೈಟ್‌‌‌‌ ಒಂದಿದೆ. ಈ ವೆಬ್‌‌‌‌ಸೈಟ್‌‌‌‌ನಿಂದ ಟಿಕೆಟ್‌‌ ಕನ್ಪರ್ಮ್‌ ಆಗಿದೆಯಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಗೊತ್ತಾಗುತ್ತದೆ.  ನಿಮ್ಮ ವೇಟಿಂಗ್‌ ಲಿಸ್ಟ್‌‌ ಕನ್ಪರ್ಮ್‌ ಆಗುವ ಸಂಭವ ಎಷ್ಟಿದೆ ಎಂದು ನಿಮಗೆ ಈ ವೆಬ್‌‌ಸೈಟ್‌‌ ಇ-ಮೇಲ್‌ ಮಾಡಿ ತಿಳಿಸುತ್ತದೆ ಮತ್ತು ಕನ್ಪರ್ಮ್‌ ಆದ ನಂತರ ಇದರ ಸೂಚನೆಯನ್ನು ಕೂಡ ನಿಮಗೆ ನೀಡುತ್ತದೆ. 
 
ಈ ವೆಬ್‌‌‌‌ಸೈಟ್‌‌‌‌‌ನ ಆಂಡ್ರೈಡ್‌ ಅಪ್ಲಿಕೇಶನ್‌‌‌ ನಿಮ್ಮ ಮೊಬೈಲ್‌‌‌‌‌‌ನಲ್ಲಿ ಡೌನ್‌‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ವೇಟಿಂಗ್‌ ಲಿಸ್ಟ್‌‌‌‌ನಲ್ಲಿ ನಿಮ್ಮ ಟಿಕೆಟ್‌‌ ಕನ್ಪರ್ಮ್‌ ಆಗುತ್ತದೆಯೋ ಇಲ್ಲವೋ ಎಂದು ತಿಳಿಸುತ್ತದೆ.  
 
ಈ ಆಪ್‌‌‌‌ ಅನ್ನು ಎನ್‌‌ಐಟಿ, ಜೆಮ್‌ಶೇಡ್‌‌‌‌ಪುರ್‌ನಲ್ಲಿ  ಅಧ್ಯಯನ ಮಾಡಿದ ದಿನೇಶ್‌ ಮತ್ತು ‌ಸಾಸ್ತ್ರಾ ಯೂನಿವರ್ಸಿಟಿ, ತಂಜೋರ್‌‌ ನಲ್ಲಿ ಅಧ್ಯಯನ ಮಾಡಿದ ಶ್ರೀಪದ್‌ ಎನ್ನುವರು ಸಿದ್ದಪಡಿಸಿದ್ದಾರೆ. ಇವರಿಬ್ಬರು ಐಬಿಎಮ್‌‌‌‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಬುದ್ದಿವಂತಿಕೆಯಿಂದ ಏನಾದರು ಸಾಧನೆ ಮಾಡಿ ತೊರಿಸುವ ನಿಶ್ಚಯ ಮಾಡಿದರು. ಇವರಿಬ್ಬರು ಹಲವು ತರಹದ ಆಪ್‌ ಸಿದ್ದಪಡಿಸಿದ್ದಾರೆ ಮತ್ತು ಕೊನೆಯಲ್ಲಿ ಟಿಕೆಟ್‌‌ ಕನ್ಫರ್ಮೆಶನ್‌‌‌‌ಗಾಗಿ ಈ ಆಪ್‌‌‌ ಅವಿಶ್ಕಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  
 
ಇವರು ಈ ಆಪ್‌‌ ಸಿದ್ದಪಡಿಸಲು ಬಹಳಷ್ಟು ಕಠಿಣ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದಕ್ಕಾಗಿ, ಇವರಿಗೆ ನೂರಾರು ಟ್ರೆನ್‌‌ಗಳ ಅಂಕಿಅಂಶಗಳನ್ನು ಜೋಡಿಸಬೇಕಾಯಿತು.ಇದಕ್ಕಾಗಿ ಇವರು ನೂರಾರು ಬಾರಿ ರೈಲ್ವೆ ಟಿಕೆಟ್‌‌‌ ಕೂಡ ಖರೀದಿಸಿದ್ದಾರೆ ಮತ್ತು ವೇಟಿಂಗ್‌ ಲಿಸ್ಟ್‌‌‌ ಕನ್ಫರ್ಮ್‌‌ ಆಗುವ ಪ್ಯಾಟರ್ನ್‌‌‌‌ ಕೂಡ ನೋಡಿದರು. ಪ್ರತಿ ಟ್ರೆನ್‌‌‌ನ ಟಿಕೆಟ್‌‌ ಕನ್ಫರ್ಮ್‌‌ ಆಗುವ ಟೈಮಿಂಗ್‌‌ ಪತ್ತೆ ಹಚ್ಚಿದರು ಮತ್ತು ಇದರ ನಂತರ ಅಂಕಿ ಅಂಶಗಳನ್ನು ವಿಶ್ಲೇಷಣೆ ಮಾಡಿದರು. ಮೊದಲು ನಮ್ಮ ವೆಬ್‌‌ಸೈಟ್‌‌ನ ನಿಖರತೆ ಶೇ.88ರಷ್ಟು ಇತ್ತು ಈಗ  ಈ ಪ್ರಮಾಣ ಹೆಚ್ಚಾಗಿ ಶೇ.94ರಷ್ಟಾಗಿದೆ ಎಂದು ಆಪ್‌ ಸಿದ್ದಪಡಿಸಿದ ಇಬ್ಬರು ಯುವಕರು ತಿಳಿಸಿದ್ದಾರೆ. 
 
ರೈಲ್ವೆ ಇಲಾಖೆ ‌ ಈ ಇಂಜಿನಿಯರ್‌‌ಗಳಿಗೆ ಸನ್ಮಾನ ಮಾಡುವ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada