ನಿಮ್ಮ ವೈ-ಫೈ ಡೇಟಾ ಕಳುವಾಗುತ್ತಿದೆಯೇ? ಪತ್ತೆ ಹಚ್ಚಲು ಹೀಗೆ ಮಾಡಿ

Webdunia
ಸೋಮವಾರ, 9 ಮೇ 2016 (12:50 IST)
ನಿಮ್ಮ ವೈ-ಫೈ ಡೇಟಾವನ್ನು ಕದಿಯುತ್ತಿದ್ದಾರೆ ಎಂದು ನಿಮಗೆ ಎಂದಾದರು ಅನ್ನಿಸಿದೆಯೇ? ಆದರೆ ಈ ಬಗ್ಗೆ ಯಾವುದೆ ಕುರುಹು ಸಿಗುತ್ತಿಲ್ಲವೇ? ಇಗ ಆ ಚಿಂತೆ ಬಿಡಿ.
ನಿಮ್ಮ ವೈ-ಫೈ ಡೇಟಾವನ್ನು ಯಾರಾದರು ಕದಿಯುತ್ತಿದ್ದರೆ, ಯಾವುದೇ ಸಕಾರಣವಿಲ್ಲದೆ ನಿಮ್ಮ ಇಂಟರ್ನೆಟ್ ಬ್ರೌಸಿಂಗ್ ಸ್ಪೀಡ್ ಕಡಿಮೆಯಾಗುತ್ತದೆ.
 
ವಾಸ್ತವವಾಗಿ ನಿಮಗೆ ತಿಳಿಯದೆ ನಿಮ್ಮ ವೈ-ಫೈ ಡೇಟಾವನ್ನು ಯಾರಾದರು ಕದಿಯುತ್ತಿದ್ದರೆ, ಈ ಮುಂದಿನ ವಿಧಾನದ ಮೂಲಕ ಕಂಡುಹಿಡಿಯಬಹುದಾಗಿದೆ.
 
1. ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಫಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
 
2. ಫಿಂಗ್ ಆಪ್‌ ಇನ್‌ಸ್ಟಾಲ್ ಮಾಡಿ. ನಂತರ ನೀವು ಸೆಟ್ಟಿಂಗ್ ಮತ್ತು ರಿಫ್ರೇಶ್ ಬಟನ್ ಜೊತೆಗೆ ನಿಮ್ಮ ನೆಟವರ್ಕ ಹೆಸರನ್ನು ಕಾಣಬಹುದು.
 
3. ರಿಫ್ರೇಶ್ ಬಟನ್‌ ಕ್ಲಿಕ್ ಮಾಡುವ ಮೂಲಕ, ನಿಮ್ಮ ವೈ-ಫೈ ನೆಟ್‌ವರ್ಕ್‌ನಿಂದ ಸಂಪರ್ಕ ಹೊಂದಿರುವ ಎಲ್ಲಾ ನೆಟ್‌ವರ್ಕ್‌ಗಳನ್ನು ಕಾಣಬಹುದಾಗಿದ್ದು, ಸ್ಮಾರ್ಟ್‌ಪೋನ್ ಅಥವಾ ಕಂಪ್ಯೂಟರ್ ಮೂಲಕ ಏರ್ಪಟ್ಟ ನೆಟ್‌ವರ್ಕ ಸಂಪರ್ಕವನ್ನು ಸಹ ಕಾಣಬಹುದಾಗಿದೆ.
 
4. ಇದೀಗ, ನಿಮ್ಮ ಪರವಾನಿಗೆ ಇಲ್ಲದೆ, ನಿಮ್ಮ ವೈಫೈ ಡೇಟಾವನ್ನು ಬಳಸಿಕೊಳ್ಳುತ್ತಿರುವ ಸಂಪರ್ಕವನ್ನು ಎಮ್‌ಎಸಿ ಅಡ್ರೆಸ್ ಬಳಸಿಕೊಂಡು ಬ್ಲಾಕ್ ಮಾಡಿ. 
 
5. ನೀವು ಸಂಪರ್ಕ ಹೊಂದಿರುವ ಕಂಪ್ಯೂಟರ್‌ನಲ್ಲಿ ವೆಬ್ ಬ್ರೌಸರ್ ತೆರೆದು, ನಿಮ್ಮ ರೂಟರ್ ಐಪಿ, ಐಡಿ ಮತ್ತು ಪಾಸ್‌ವರ್ಡ್ ಟೈಪ್ ಮಾಡಿ.
 
6. ಸೆಕ್ಯೂರಿಟಿಯಲ್ಲಿರುವ ಮ್ಯಾಕ್ ಫಿಲ್ಟರಿಂಗ್ ಮೇಲೆ ಕ್ಲಿಕ್ ಮಾಡಿ, ನಂತರ ಆಡ್ ಡಿವೈಸ್ ಆಯ್ಕೆಯನ್ನು ಆಯ್ದುಕೊಳ್ಳಿ.
 
7. ನಂತರ, ನೀವು ಬ್ಲಾಕ್ ಮಾಡಬಹಸುವ ಸಂಪರ್ಕದ ಮ್ಯಾಕ್ ಅಡ್ರಸ್‌ನ್ನು ಟೈಪ್‌ ಮಾಡಿ, ಅಪ್ಲೈ, ಸೆವ್ ಮತ್ತು ಒಕೆ ಆಯ್ಕೆಯನ್ನು ಕ್ಲಿಕ್ ಮಾಡಿ.
 
ಈ ವಿಧಾನದಿಂದ ಅನಗತ್ಯ ಸಂಪರ್ಕಗಳನ್ನು ತಡೆಯಹುದಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವದೆಹಲಿ ದಟ್ಟ ಮಂಜು, ಹವಾಮಾನ ಎಫೆಕ್ಟ್‌, ಇಂದು ಕೂಡಾ ವಿಮಾನ ಪ್ರಯಾಣಿಕರಿಗೆ ಶಾಕ್

48 ಗಂಟೆ ಕೆಲಸ ಮಾಡಿದರೆ 3 ದಿನ ವೀಕಾಫ್: ಕೇಂದ್ರದಿಂದ ಕಾರ್ಮಿಕ ಹೊಸ ನಿಯಮ

ದರ್ಶನ್ ಅರೆಸ್ಟ್ ಆದಾಗ ಪುತ್ರ ವಿನೀಶ್ ಪರಿಸ್ಥಿತಿ ಹೇಗಾಗಿತ್ತು: ವಿವರಿಸಿದ ಪತ್ನಿ ವಿಜಯಲಕ್ಷ್ಮಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ನಾನೇ ಸಿಎಂ, 2028 ಕ್ಕೂ ನಾವೇ ಅಧಿಕಾರಕ್ಕೆ ಬರೋದು: ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆ

ಮುಂದಿನ ಸುದ್ದಿ
Show comments