Select Your Language

Notifications

webdunia
webdunia
webdunia
webdunia

ಬಿಎಸ್‍ಎನ್‍ಎಲ್‍ ರೂ. 149ಕ್ಕೆ ಅಪರಿಮಿತ ಕರೆ ಮತ್ತು ಡಾಟಾ?

ಬಿಎಸ್‍ಎನ್‍ಎಲ್‍ ರೂ. 149ಕ್ಕೆ ಅಪರಿಮಿತ ಕರೆ ಮತ್ತು ಡಾಟಾ?
New Delhi , ಸೋಮವಾರ, 19 ಡಿಸೆಂಬರ್ 2016 (11:16 IST)
ಟೆಲಿಕಾಂ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಬಿಎಸ್‍ಎನ್‌ಎಲ್ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಿದ್ದವಾಗಿದೆ. ಈಗಾಗಲೆ ಮಾರುಕಟ್ಟೆಯಲ್ಲಿರುವ ಸ್ಪರ್ಧೆಗೆ  ಎಲ್ಲಾ ಟೆಲಿಕಾಂ ಕಂಪನಿಗಳು ನಾನಾ ತರದ ಯೋಜನೆಗಳನ್ನು ಪ್ರಕಟಿಸುತ್ತಿವೆ. 
 
ಇದೀಗ ಯಾವುದೇ ನೆಟ್‍ವರ್ಕ್‌ಗೆ ಅಪರಿಮಿತ ಕರೆಗಳನ್ನು ಮಾಡುವ ಸೌಲಭ್ಯವನ್ನು ಕೇವಲ ರೂ. 149ಕ್ಕೆ ಕೊಡಲು ಬಿಎಸ್ಎನ್ಎಲ್ ಮುಂದಾಗಿದೆ. ಅಪರಿಮಿತ ಕರೆ, ಡಾಟಾವನ್ನು ಕೇವಲ ರೂ. 149ಕ್ಕೆ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಕೊಡಬೇಕೆಂದು ಯೋಚಿಸುತ್ತಿರುವುದಾಗಿ ಬಿಎಸ್ಎನ್ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ.
 
ದೇಶದಾದ್ಯಂತ ರೋಮಿಂಗ್ ಚಾರ್ಚ್ ಇಲ್ಲದೆ ಉಚಿತ ಒಳಬರುವ ಕರೆಗಗಳಿಗೆ ಅನುಮತಿ ನೀಡಿರುವುದರಿಂದ ಸಂಸ್ಥೆಗೆ ಗ್ರಾಹಕರು ಜಾಸ್ತಿ ಆಗಿದ್ದಾರೆ. ದೇಶದಲ್ಲಿನ ಒಟ್ಟು ಗ್ರಾಹಕರ ಸಂಖ್ಯೆಯಲ್ಲಿ ಶೇ. 10ರಷ್ಟು ನಮಗಿದ್ದಾರೆಂದು, ಆ ಸಂಖ್ಯೆಯನ್ನು ಶೇ. 15ಕ್ಕೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಗೇಡ್‌ಗೆ ವಿರೋಧ ಏಕೆ ಎಂದು ಬಿಎಸ್‌ವೈರನ್ನೇ ಕೇಳಿ: ಕೆ.ಎಸ್.ಈಶ್ವರಪ್ಪ