ಬಿಎಸ್‌ಎನ್ಎಲ್ ಲಾಭದಲ್ಲಿ ಭಾರಿ ಏರಿಕೆ

Webdunia
ಸೋಮವಾರ, 30 ಜನವರಿ 2017 (14:18 IST)
ಈ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದ ಅಂಕಿಅಂಶವನ್ನು ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿದ್ದು, ನಷ್ಟ ಕಡಿಮೆಯಾಗಿರುವುದು ಕಂಡುಬಂದಿದೆ. ಹಿಂದಿನ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ರು. 6,121 ಕೋಟಿಯಿದ್ದ ನಷ್ಟ ರು. 4890 ಕೋಟಿಗೆ ಇಳಿದಿದೆ. ಹಿಂದಿನ ವರ್ಷದಲ್ಲಿ ರು. 18,314.9 ಕೋಟಿಯಿದ್ದ ಸೇವೆಯಿಂದ ಗಳಿಸಲಾದ ಆದಾಯವು ಶೇ. 5.8ರಷ್ಟು ಹೆಚ್ಚಾಾಗಿದ್ದು, ರು. 19,379.6 ಕೋಟಿ ತಲುಪಿದೆ. ಇತರೆ ಆದಾಯದಲ್ಲಿ ಶೇ. 42ರಷ್ಟು ಏರಿಕೆಯಾಗಿದೆ. ರು. 20,290 ಕೋಟಿಯಿದ್ದ ಒಟ್ಟು ಆದಾಯ ಶೇ. 7ರಷ್ಟು ಹೆಚ್ಚಾಗಿದ್ದು ರು. 18,954 ಕೋಟಿಗೆ ತಲುಪಿದೆ. 
 
ಮಾಹಿತಿ ಬಿಡುಗಡೆ ಮಾಡಿದ ಬಿಎಸ್‌ಎನ್‌ಎಲ್ ಮುಖ್ಯಸ್ಥ ಅನುಮಪ್ ಶ್ರೀವಾಸ್ತವ ಅವರು, ‘ಕಳೆದ ವರ್ಷಕ್ಕಿಿಂತ ಈ ವರ್ಷದ ಮೂರು ತ್ರೈಮಾಸಿಕದಲ್ಲಿ ನಷ್ಟ ಕಡಿಮೆಯಾಗಿದೆ. ನಾಲ್ಕನೇ ವರ್ಷದಲ್ಲಿ ಆದಾಯ ಹೆಚ್ಚಾಾಗುವ ನಿರೀಕ್ಷೆೆಯಿದ್ದು, ನಷ್ಟ ಇನ್ನಷ್ಟು ಕಡಿಮೆಯಾಗಲಿದೆ’ ಎಂದು ತಿಳಿಸಿದ್ದಾಾರೆ. 
 
ಸಾರ್ವಜನಿಕ ವಲಯದ ದೂರಸಂಪರ್ಕ ಕಂಪೆನಿಗಳು 2013-14ರಲ್ಲಿ ರು. 7,019 ಕೋಟಿ ನಷ್ಟದಲ್ಲಿದ್ದವು. ಹಾಗೆಯೇ 2014-15ರಲ್ಲಿ ನಷ್ಟವು ರು. 8234 ಕೋಟಿಗೆ ಇಳಿದಿತ್ತು. ಇನ್ನು 2015-16ರಲ್ಲಿ ನಷ್ಟವು ರು. 3,880 ಕೋಟಿಗೆ ಇಳೀದಿತ್ತು. ಈ ಹಣಕಾಸು ವರ್ಷದಲ್ಲಿ ನಷ್ಟ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂಬ ನಿರೀಕ್ಷೆೆಯಲ್ಲಿ  ದೂರಸಂಪರ್ಕ ಕಂಪೆನಿಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video, ವಿಧಾನಸಭೆಯೊಳಗೆ ರಾಜಸ್ಥಾನದ ಬಿಜೆಪಿ ನಾಯಕನ ಇದೆಂಥಾ ನಡವಳಿಕೆ

ಕುರ್ಚಿ ಗುದ್ದಾಟದ ನಡುವೆ ಕುತೂಹಲ ಮೂಡಿಸಿದ ಪರಮೇಶ್ವರ್ ಹೇಳಿಕೆ

Video: ನಾನೂ, ನನ್ನ ಸಹೋದರಿ ಜಗಳ ಮಾಡಿದ್ವಿ: ಪ್ರಿಯಾಂಕಾಗೆ ಹೀಗೆ ಮ್ಯಾಜಿಕ್ ಮಾಡಿದ್ರಂತೆ ರಾಹುಲ್ ಗಾಂಧಿ

ಅಮ್ಮನಿಂದ ತಳ್ಳಲ್ಪಟ್ಟ ಕೋತಿ ಮರಿಗೆ ಅಮ್ಮನಾಗಿದ್ದ ಗೊಂಬೆಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡ್‌

ಶೀಘ್ರವೇ ನಗರದ 28 ಶಾಸಕರೊಂದಿಗೆ ಸಭೆ ನಡೆಸುತ್ತೇನೆಂದ ಈಶ್ವರ್ ಖಂಡ್ರೆ, ಕಾರಣ ಏನ್ ಗೊತ್ತಾ

ಮುಂದಿನ ಸುದ್ದಿ
Show comments