Webdunia - Bharat's app for daily news and videos

Install App

ಮಂಗಳೂರಿನಲ್ಲಿ ಬ್ರಿಗೇಡ್ ಪಿನಾಕಲ್ ಲೋಕಾರ್ಪಣೆ

Webdunia
ಮಂಗಳವಾರ, 10 ಜನವರಿ 2017 (14:44 IST)
ದೇಶದ ಖ್ಯಾತ ಬಿಲ್ಡರ್‌ಗಳಲ್ಲಿ ಒಂದಾದ ಬೆಂಗಳೂರು ಮೂಲದ ಬ್ರಿಗೇಡ್ ಗ್ರೂಪ್ ಕಳೆದ 30 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಹೊಸ ಹೊಸ ಆಕರ್ಷಕ ವಿನ್ಯಾಸಗಳ ವಸತಿ ಯೋಜನೆಗಳನ್ನು ನೀಡುತ್ತಾ ಬಂದಿದೆ. ಇದೀಗ ಮಂಗಳೂರಿನಲ್ಲಿ ಬ್ರಿಗೇಡ್‍ನ ಬ್ರಿಗೇಡ್ ಪಿನಾಕಲ್ ಎಂಬ ಮೊದಲ ಲಕ್ಷುರಿ ಅಪಾರ್ಟ್‍ಮೆಂಟ್ ಅನ್ನು ಸಿದ್ಧಪಡಿಸಿದ್ದು, ಇದನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಹಿದ್ದೀನ್ ಬಾವ ಅವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬ್ರಿಗೇಡ್ ಎಂಟರ್‍ಪ್ರೈಸಸ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್ ಮತ್ತು ಸ್ಥಳೀಯ ಕಾರ್ಪೊರೇಟರ್ ರಾಜೇಶ್ ಕೆ. ಉಪಸ್ಥಿತರಿದ್ದರು.
 
ಮಂಗಳೂರಿನ ಸನಿಹದಲ್ಲಿರುವ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇರೇಬೈಲ್‍ನಲ್ಲಿ ಈ ಬ್ರಿಗೇಡ್ ಪಿನಾಕಲ್ ನಿರ್ಮಾಣವಾಗಿದೆ. ಒಟ್ಟು 3.3 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ವಸತಿ ಅಪಾರ್ಟ್‍ಮೆಂಟ್‍ನಲ್ಲಿ ಒಟ್ಟು 22 ಮಹಡಿಗಳಲ್ಲಿ 394 ಅಪಾರ್ಟ್‍ಮೆಂಟ್‍ಗಳು ಸಾರ್ವಜನಿಕರಿಗೆ ಲಭ್ಯವಿವೆ. 2 ಮತ್ತು 3 ಬೆಡ್‍ರೂಂ ಹೊಂದಿದ ಈ ಅಪಾರ್ಟ್‍ಮೆಂಟ್‍ಗಳು ಲಕ್ಷುರಿ ಮತ್ತು ವಿನ್ಯಾಸದಲ್ಲಿ ಅತ್ಯುತ್ತಮವಾಗಿವೆ. ಕ್ಲಬ್‍ಹೌಸ್, ಸ್ವಿಮಿಂಗ್‍ಪೂಲ್, ಜಿಮ್ನಾಶಿಯಂ, ಸಾಂಸ್ಕøತಿಕ ವಲಯ ಸೇರಿದಂತೆ ಎಲ್ಲಾ ಅಗತ್ಯ ಮೂಲಸೌಲಭ್ಯಗಳನ್ನು ಹೊಂದಿದ ಸುಸಜ್ಜಿತ ಅಪಾರ್ಟ್‍ಮೆಂಟ್ ಇದಾಗಿದೆ.
 
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬ್ರಿಗೇಡ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್ ಅವರು ಮಾತನಾಡಿ, ``ಬ್ರಿಗೇಡ್ ಪಿನಾಕಲ್ ಮೂಲಕ ಬ್ರಿಗೇಡ್ ಗ್ರೂಪ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರಿಗೆ ಪದಾರ್ಪಣೆ ಮಾಡಿದೆ. ಬೆಂಗಳೂರಿನ ವಿಶ್ವಾಸಾರ್ಹ ಮತ್ತು ಖ್ಯಾತನಾಮ ಡೆವಲಪರ್ ಕಂಪನಿಯ ಗುಣಮಟ್ಟದ ಅಪಾರ್ಟ್‍ಮೆಂಟ್‍ನ ಅನುಭವವನ್ನು ಇದೀಗ ಮಂಗಳೂರಿಗರು ಬ್ರಿಗೇಡ್ ಪಿನಾಕಲ್ ಮೂಲಕ ಅನುಭವಿಸಲಿದ್ದಾರೆ. ನಮ್ಮ ಮೊಟ್ಟ ಮೊದಲ ವಸತಿ ಯೋಜನೆಯನ್ನು ಮಂಗಳೂರಿನಲ್ಲಿ ಪೂರ್ಣಗೊಳಿಸಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಇಲ್ಲಿನ ಗ್ರಾಹಕರಿಗೆ ಉತ್ತಮವಾದ ಮತ್ತು ಧನಾತ್ಮಕವಾದ ಸೇವೆಯನ್ನು ನೀಡಲಿದ್ದೇವೆ ಮತ್ತು ಆ ಸೇವೆಯ ಅನುಭವವನ್ನು ಗ್ರಾಹಕರು ಹೊಂದಲಿದ್ದಾರೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments