Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಬ್ರಿಗೇಡ್ ಗ್ರೂಪ್‍ನಿಂದ ಮೆಗಾ ಹೋಂ ಫೆಸ್ಟ್

Webdunia
ಶುಕ್ರವಾರ, 10 ಫೆಬ್ರವರಿ 2017 (12:48 IST)
ಭಾರತದಲ್ಲಿ ಮುಂಚೂಣಿಯಲ್ಲಿರುವ ಡೆವಲಪರ್ ಆಗಿರುವ ಬ್ರಿಗೇಡ್ ಗ್ರೂಪ್ ಆಯೋಜಿಸಿರುವ ಮೆಗಾ ಹೋಂ ಫೆಸ್ಟ್‍ಗೆ ಫೆಬ್ರವರಿ 10 ಶುಕ್ರವಾರ ಚಾಲನೆ ಸಿಕ್ಕಿದೆ. ಈ ಫೆಸ್ಟ್ ಫೆಬ್ರವರಿ 12 ರವರೆಗೆ ನಡೆಯಲಿದೆ. ಬ್ರಿಗೇಡ್ ಗೇಟ್‍ವೇಯಲ್ಲಿರುವ ವಲ್ರ್ಡ್ ಟ್ರೇಡ್ ಸೆಂಟರ್‌ನ ನಾರ್ಥರ್ನ್ ಟೆರೇಸ್‍ನಲ್ಲಿ ನಡೆಯುತ್ತಿರುವ ಈ ಮೆಗಾ ಹೋಂ ಫೆಸ್ಟ್‍ನಲ್ಲಿ ಬ್ರಿಗೇಡ್ ಗ್ರೂಪ್ ದಕ್ಷಿಣ ಭಾರತದ 6 ನಗರಗಳಲ್ಲಿ ಕೈಗೊಂಡಿರುವ 30 ಕ್ಕೂ ಹೆಚ್ಚು ವಸತಿ ಯೋಜನೆಗಳನ್ನು ಅನಾವರಣಗೊಳಿಸಲಾಗಿದೆ.
 
ಈ ಮೆಗಾ ಮೇಳದ ಬಗ್ಗೆ ಮಾತನಾಡಿದ ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್ ಅವರು, ``ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಗಳೂರು, ಹೈದ್ರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಬ್ರಿಗೇಡ್ ಸಮೂಹ ಸಂಸ್ಥೆ ಕೈಗೊಂಡಿರುವ ವಸತಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಈ ಮೆಗಾ ಮೇಳದಲ್ಲಿ ನೀಡಲಾಗುತ್ತಿದೆ. ಬ್ರಿಗೇಡ್ ಬ್ರಾಂಡ್‍ನ ಮನೆಗಳನ್ನು ಖರೀದಿಸಲು ಸಾರ್ವಜನಿಕರಿಗೆ ಇದೊಂದು ಸುವರ್ಣಾವಕಾಶವಾಗಿದೆ’’ ಎಂದರು.
 
ಬ್ರಿಗೇಡ್ ಮೆಗಾ ಹೋಂ ಫೆಸ್ಟ್ ಕುರಿತು ವಿವಿಧ ಹಂತದಲ್ಲಿರುವ ಬ್ರಿಗೇಡ್ ಗ್ರೂಪ್‍ನ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಈ ಬ್ರಿಗೇಡ್ ಮೆಗಾ ಹೋಂ ಫೆಸ್ಟ್‍ನಲ್ಲಿ ಪಡೆಯಬಹುದಾಗಿದೆ. 
 
ಈ ಮೂರು ದಿನಗಳ ಕಾಲ ನಡೆಯುವ ಮೆಗಾ ಫೆಸ್ಟ್‍ನಲ್ಲಿ ಗ್ರಾಹಕರು ತಮಗಿಷ್ಟವಾದ ಬ್ರಿಗೇಡ್‍ಗ್ರೂಪ್‍ನ ಮನೆಯನ್ನು ಆಯ್ಕೆ ಮಾಡಿಕೊಂಡು ಖರೀದಿ ಮಾಡಲು ಒಂದು ಉತ್ತಮ ಅವಕಾಶವಾಗಿದೆ. ಶೂನ್ಯ ಬಡ್ಡಿದರ ಮತ್ತು 2 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿ ಮೌಲ್ಯದವರೆಗೆ ಉಚಿತವಾಗಿ ಫರ್ನಿಶಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ. 
 
ಈ ಮೂರು ದಿನಗಳ ಫೆಸ್ಟ್‍ನಲ್ಲಿ ಮನೆಗಳನ್ನು ಬುಕ್ ಮಾಡುವವರಿಗೆ ಮುಂದಿನ 12 ತಿಂಗಳವರೆಗೆ ಪ್ರೈಸ್ ಪ್ರೊಟೆಕ್ಷನ್ ಇರಲಿದೆ. ವಲ್ರ್ಡ್ ಟ್ರೇಡ್ ಸೆಂಟರ್‍ನ ದಿ ನಾರ್ಥರ್ನ್ ಟೆರೇಸ್‍ನಲ್ಲಿ ಆರಂಭವಾಗಿರುವ ಈ ಮೆಗಾ ಫೆಸ್ಟ್‍ಗೆ ಗ್ರಾಹಕರು ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆವರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments