Webdunia - Bharat's app for daily news and videos

Install App

ಬ್ಲ್ಯೂ ಪ್ಯೂರ್ ಎಕ್ಸ್‌ಆರ್ ಮಾಡೆಲ್‌ನ 3ಡಿ ಟಚ್ ಮೊಬೈಲ್ ಮಾರುಕಟ್ಟೆಗೆ

Webdunia
ಮಂಗಳವಾರ, 30 ಆಗಸ್ಟ್ 2016 (13:02 IST)
ಕಳೆದ ತಿಂಗಳಷ್ಟೇ ಎನರ್ಜಿ ಎಕ್ಸ್‌ಎಲ್‌ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಬೆನ್ನಲ್ಲೆ ಬ್ಲ್ಯೂ ಸಂಸ್ಥೆ ಇದೀಗ, ಪ್ಯೂರ್ ಎಕ್ಸ್‌ಆರ್ ಹೆಸರಿನ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 
 
ಈ ಸ್ಮಾರ್ಟ್‌ಪೋನ್‌ಗಳು ಅಮೆಜಾನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದು, 20,200 ರೂಪಾಯಿಗಳಲ್ಲಿ ಗ್ರಾಹಕರ ಕೈ ಸೇರಲಿದೆ.
 
ಬ್ಲ್ಯೂ ಪ್ಯೂರ್ ಎಕ್ಸ್‌ಆರ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಗೋಲ್ಡ್ ಮತ್ತು ಗ್ರೇ ಬಣ್ಣದಲ್ಲಿ ಲಭ್ಯವಿದ್ದು, ಪೋನ್‌ನ ಮುಂಭಾಗದಲ್ಲಿ ಫಿಂಗರ್‌ಪ್ರೀಂಟ್ ಸ್ಕ್ಯಾನರ್ ವೈಶಿಷ್ಟ್ಯ ಹೊಂದಿದೆ. ಈ ಪೋನ್‌ಗಳ ಕೆಳಭಾಗದಲ್ಲಿ ಸ್ಪೀಕರ್ ಗ್ರೀಲ್ ಹಾಗೂ 3.5ಎಂಎಂ ಆಡಿಯೋ ಜಾಕ್ ಒಳಗೊಂಡಿದೆ.
 
ಬ್ಲ್ಯೂ ಪ್ಯೂರ್ ಎಕ್ಸ್‌ಆರ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಡ್ಯುಯಲ್ ಸಿಮ್ ವಿಶೇಷತೆಯನ್ನು ಹೊಂದಿದ್ದು, ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಪೋನ್‌ಗಳು 5.5 ಇಂಚಿನ ಫುಲ್ ಎಚ್‌ಡಿ (1080x1920 ಪಿಕ್ಸೆಲ್ಸ್) ಸೂಪರ್ ಆಮೊಲೆಡ್ ಡಿಸ್‌ಪ್ಲೇ ಜೊತೆಗೆ 401ಪಿಪಿಐ ಪಿಕ್ಸೆಲ್ ಡೆನ್ಸಿಟಿ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯ ವಿಶೇಷತೆಯನ್ನು ಒಳಗೊಂಡಿದೆ. 
 
ಈ ಪೋನ್‌ಗಳು 4ಜಿಬಿ ರ್ಯಾಮ್ ಮತ್ತು ಮೀಡಿಯಾ ಟೆಕ್ ಹೆಲಿಯೋ ಪಿ10 ಎಮ್‌ಟಿ6755 ಆಕ್ಟಾ ಕೋರ್ ಪ್ರೊಸೆಸರ್ ಜೊತೆಗೆ ಮಾಲಿ ಟಿ860 ಗ್ರಾಫಿಕ್ಸ್ ಜಿಪಿಯು ವೈಶಿಷ್ಟ್ಯತೆಯನ್ನು ಹೊಂದಿದ್ದು, 64 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹಾಗೂ 64 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 
 
ಬ್ಲ್ಯೂ ಪ್ಯೂರ್ ಎಕ್ಸ್‌ಆರ್ ಪೋನ್‌ಗಳು 6ಪಿ ಲೆನ್ಸ್, ಲೆಸರ್ ಫೋಕಸ್, ಪೇಸ್ ಡಿಟೆಕ್ಷನ್ ಆಟೋಫೋಕಸ್, ಎಫ್/1.8 ಅಪಾರ್ಚರ್, ಎಲ್‌ಇಡಿ ಫ್ಲ್ಯಾಶ್ ಹಾಗೂ ಎಚ್‌ಡಿ ವಿಡಿಯೋ ರೆಕಾರ್ಡಿಂಗ್ (1080P@30fps) ಜೊತೆಗೆ 16 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದ್ದು, ವೈಡ್ ಆಂಗಲ್ ಲೆನ್ಸ್ ಜೊತೆಗೆ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ವೈಶಿಷ್ಟ್ಯ ಒಳಗೊಂಡಿದೆ. 
 
ಈ ಪೋನ್‌ಗಳು ತ್ವರಿತ ಚಾರ್ಜ್ ವೈಶಿಷ್ಟ್ಯದ 3000 ಎಂಎಚ್‌ಝಡ್ ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಹೊಂದಿದ್ದು, 4ಜಿ ಎಲ್‌ಟಿಇ, ವೈ-ಫೈ ಎ/ಬಿ/ಜಿ/ಎನ್, ಜಿಪಿಎಸ್, ಬ್ಲೂಟೂತ್ ವಿ4.0 ಮತ್ತು ನೆಕ್ಸ್ಟ್‌ರೇಡಿಯೋ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments