Select Your Language

Notifications

webdunia
webdunia
webdunia
webdunia

ಕಪ್ಪು ಹಣದ ಕೇಸ್ ದಾಖಲು: ಉದ್ಯಮಿ ಖುರೇಷಿಗೆ ಸಮನ್ಸ್

ಕಪ್ಪು ಹಣದ ಕೇಸ್ ದಾಖಲು: ಉದ್ಯಮಿ ಖುರೇಷಿಗೆ ಸಮನ್ಸ್
ನವದೆಹಲಿ , ಶನಿವಾರ, 31 ಜನವರಿ 2015 (10:38 IST)
ವಿವಾದಿತ ಉದ್ಯಮಿ ಮೊಯಿನ್ ಅಹ್ಮದ್ ಖುರೇಷಿ ಕಪ್ಪು ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಅವರಿಗೆ ಆರೋಪಿಯಾಗಿ ಸಮನ್ಸ್ ಕಳಿಸಿದೆ. ಖುರೇಷಿ ತಮ್ಮ 20 ಕೋಟಿ ರೂ. ಆದಾಯವನ್ನು ಬಹಿರಂಗ ಮಾಡದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಕಪ್ಪು ಹಣದ ಕೇಸ್ ದಾಖಲು ಮಾಡಿತ್ತು.

ಮಾಂಸ ರಫ್ತುದಾರರಾದ ಖುರೇಷಿ ಮತ್ತು ಅವರ ನೌಕರ ಆದಿತ್ಯಾ ಶರ್ಮಾ ಅವರಿಗೆ ಮಾ.2ರಂದು ಕೋರ್ಟ್‌ಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಆದಾಯ ತೆರಿಗೆ ಕಾಯ್ದೆಯ ವಿವಿಧ ನಿಯಮಗಳಡಿ ಅವರ ವಿರುದ್ಧ ದೂರನ್ನು ಕೋರ್ಟ್ ಪರಗಣಿಸಿತು.  

2014ರ ಫೆಬ್ರವರಿಯಲ್ಲಿ ಖುರೇಷಿ ನಿವಾಸದಲ್ಲಿ ತನಿಖೆ ನಡೆಸುವಾಗ ಖುರೇಷಿ ಆದಾಯ ಮತ್ತು ಆಸ್ತಿಪಾಸ್ತಿಯ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಬ್ಯಾಂಕ್‌ ಲಾಕರ್‌ಗಳ ಪಟ್ಟಿಯನ್ನು ಒದಗಿಸುವಂತೆ ಕೇಳಿದಾಗ,  ತಮ್ಮ ಬಳಿ ಎಚ್‌ಎಸ್‌ಬಿಸಿ ಶಾಖೆಯಲ್ಲಿ ಒಂದು ಲಾಕರ್ ಮಾತ್ರವಿದೆ ಎಂದು ಖುರೇಷಿ ಹೇಳಿದ್ದರು.

ಆದರೆ ನಂತರದ ತನಿಖೆಯಲ್ಲಿ ಖುರೇಷಿ ತಮ್ಮ ನೌಕರರು ಮತ್ತು ಸಂಗಡಿಗರ ಹೆಸರಿನಲ್ಲಿ 11 ಲಾಕರ್‌ಗಳಿರುವುದನ್ನು ಪತ್ತೆಹಚ್ಚಿದ್ದರು.ಲಾಕರ್‌ನಲ್ಲಿ 11.26 ಕೋಟಿ ನಗದು ಮತ್ತು 8.35 ಕೋಟಿ ಆಭರಣಗಳು ಲಾಕರ್‌ನಲ್ಲಿ ಪತ್ತೆಯಾಗಿದ್ದವು.

Share this Story:

Follow Webdunia kannada