Select Your Language

Notifications

webdunia
webdunia
webdunia
webdunia

ಬಿಹಾರ್: ರಸ್ತೆಗಳ ದುರಸ್ತಿಗಾಗಿ ವಾಟ್ಸಪ್‌ ಮೊರೆಹೋದ ಡಿಸಿಎಂ ತೇಜಸ್ವಿ ಯಾದವ್

ಬಿಹಾರ್:  ರಸ್ತೆಗಳ ದುರಸ್ತಿಗಾಗಿ ವಾಟ್ಸಪ್‌ ಮೊರೆಹೋದ ಡಿಸಿಎಂ ತೇಜಸ್ವಿ ಯಾದವ್
ನವದೆಹಲಿ , ಗುರುವಾರ, 30 ಜೂನ್ 2016 (18:30 IST)
ಬಿಹಾರ್ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ನಿರ್ಮಾಣ ಮತ್ತು ರಸ್ತೆ ದುರಸ್ತಿ ಕಾರ್ಯಗಳನ್ನು ಸರಾಗವಾಗಿ ಅಭಿವೃದ್ಧಿ ಪಡಿಸಲು ತ್ವರಿತ ಸಂದೇಶ ಸೇವೆ ನೀಡುತ್ತಿರುವ ವಾಟ್ಸಪ್ ಜಾಲತಾಣದ ಮೊರೆ ಹೊಗಿದ್ದಾರೆ. 
 
ಬಿಹಾರ್ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು (9470001346) ಸಂಖ್ಯೆಯ ವಾಟ್ಸಪ್ ಖಾತೆಯನ್ನು ತೆರೆದಿದ್ದು, ಸಾರ್ವಜನಿಕರು ನಗರದಲ್ಲಿ ದುರಸ್ತಿಗೊಳ್ಳದಿರುವ ರಸ್ತೆಗಳ ಚಿತ್ರಗಳನ್ನು ವಾಟ್ಸಪ್ ಖಾತೆಗೆ ಕಳುಹಿಸಿದಲ್ಲಿ ಅಂತಹ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. 
 
ಇದೀಗ, ಬಿಹಾರದ ಜನತೆ ಕಾರ್ಯದಕ್ಷತೆ ಆಧರಿತ ರಸ್ತೆ ನಿರ್ವಹಣೆ ಸ್ವತ್ತುಗಳು ಒಪ್ಪಂದದ ಅಡಿಯಲ್ಲಿ ನಿರ್ಮಾಣವಾಗಿರುವ ರಸ್ತೆಗಳ ಪರಿಸ್ಥಿತಿಯ ಕುರಿತು ಸರಕಾರದ ಗಮನಕ್ಕೆ ತರಬಹುದಾಗಿದ್ದು, ಇದರಿಂದ ರಸ್ತೆಯ ಗುಣಮಟ್ಟ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಉಪಮುಖ್ಯಮಂತ್ರಿ ಮತ್ತು ರಸ್ತೆ ನಿರ್ಮಾಣ ಖಾತೆ ಸಚಿವ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
 
ರಸ್ತೆ ನಿರ್ಮಾಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಉಪಮುಖ್ಯಮಂತ್ರಿ ಯಾದವ್, ರಸ್ತೆ ದುರಸ್ತಿಯ ಕುರಿತು ಸಾರ್ವಜನಿಕರು ನೇರವಾಗಿ ಸರಕಾರವನ್ನು ಸಂಪರ್ಕಿಸುವಂತಾಗಲು ನೂತನ ತಂತ್ರಜ್ಞಾನವಾದ ವಾಟ್ಸಪ್‌ ಬಳಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 
ರಾಜ್ಯಗಳಲ್ಲಿನ ರಸ್ತೆಗಳ ಸುಧಾರಣೆಗೆ ವಾಟ್ಸಪ್‌ ಬಳಸಿ ಜನ-ಸ್ನೇಹಿ ಪ್ರಯೋಗಕ್ಕೆ ಯಾದವ್ ಮುಂದಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
 
ಇದಕ್ಕಿಂತ ಮೊದಲು, ಜನರು ರಸ್ತೆಗಳ ದುರಸ್ತಿಗಾಗಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬೇಕಾಗಿತ್ತು. ನಂತರ ದೂರುಗಳನ್ನು ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ರವಾನಿಸಲಾಗುತ್ತಿದ್ದು. ಇದರಿಂದಾಗಿ ರಸ್ತೆಗಳ ದುರಸ್ತಿ ಕಾರ್ಯ ವಿಳಂಬವಾಗುತ್ತಿತ್ತು.   

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಅಣಕಿಸಿ ಪೋಸ್ಟರ್ ಹಾಕಿದ ಸೇನೆ; ಬಿಜೆಪಿಯಿಂದ ತಕ್ಕ ಉತ್ತರದ ಎಚ್ಚರಿಕೆ