Select Your Language

Notifications

webdunia
webdunia
webdunia
webdunia

ಶೌಚಾಲಯಗಳಲ್ಲಿ ಉಚಿತ ವೈ-ಫೈ ಸೌಲಭ್ಯ

ಶೌಚಾಲಯಗಳಲ್ಲಿ ಉಚಿತ ವೈ-ಫೈ ಸೌಲಭ್ಯ
ಬೀಜಿಂಗ್ , ಮಂಗಳವಾರ, 26 ಏಪ್ರಿಲ್ 2016 (19:57 IST)
ಬೀಜಿಂಗ್ ಪುರಸಭೆ "ಶೌಚಾಲಯ ಕ್ರಾಂತಿ" ಯೋಜನೆ ಅಡಿ ಪ್ರಸಕ್ತ ವರ್ಷದಲ್ಲಿ ಉಚಿತ ವೈ-ಫೈ ಸೇವೆ ಸೇರಿದಂತೆ 100 ಶೌಚಾಲಯ ಗೃಹಗಳನ್ನು ನಿರ್ಮಿಸಲು ಮುಂದಾಗಿದೆ.
ಶೌಚಾಲಯ ಗೃಹಗಳನ್ನು ಟೊಂಗ್‌ಝೌ ಮತ್ತು ಫಂಗ್ಷಾನ್ ಜಿಲ್ಲೆಯಲ್ಲಿ ನಿರ್ಮಿಸಲು ಮುಂದಾಗಿದ್ದು, ಈ ಶೌಚಾಲಯಗಳು ಎಟಿಎಮ್ ಮಶಿನ್, ಮೊಬೈಲ್ ಪೋನ್ ಮತ್ತು ವಿದ್ಯುತ್ ವಾಹನಗಳನ್ನು ಚಾರ್ಚ್ ಮಾಡಲು ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ ಎಂದು ಬೀಜಿಂಗ್ ಪುರಸಭೆಯ ಅಧಿಕಾರಿ ಜಿಯಾಂಗ್ ತಿಳಿಸಿದ್ದಾರೆ.
 
ತಾಯಂದಿರು ನಿಶ್ಚಿಂತೆಯಿಂದ ಶೌಚಾಲಯವನ್ನು ಬಳಸಿಕೊಳ್ಳಲು ಮುಂದಿನ ದಿನಗಳಲ್ಲಿ ಬೇಬಿ ಸೀಟ್ಸ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
 
ಈ ಮಾದರಿಯ ಪ್ರತಿ ಶೌಚಾಲಯ ನಿರ್ಮಾಣಕ್ಕೆ 7,685 ಡಾಲರ್ ವೆಚ್ಚವಾಗಲಿದೆ ಎಂದು ಜಿ ಯಾಂಗ್ ಅಂದಾಜಿಸಿದ್ದಾರೆ.
 
ನಗರದಲ್ಲಿ ಪ್ರಸ್ತುತವಿರುವ ಶೌಚಾಲಯಗಳಲ್ಲಿ ಮಕ್ಕಳ ಮೂತ್ರಾಲಯ ಮತ್ತು ತಡೆಗೋಡೆ ಮುಕ್ತ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಈ ಶೌಲಾಯಗಳಲ್ಲಿ  12 ಡಿಗ್ರಿ ಸೆಲ್ಸಿಯಸ್-30 ಡಿಗ್ರಿ ಸೆಲ್ಸಿಯಸ್‌ನ ಹವಾ ನಿಯಂತ್ರಣ ವ್ಯವಸ್ಥೆ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಚುನಾವಣೆ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 18.5 ಕೋಟಿ ರೂ ಹಣ ವಶ