Webdunia - Bharat's app for daily news and videos

Install App

ಜೆನ್‌ಫೋನ್ ಗೋ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

Webdunia
ಮಂಗಳವಾರ, 26 ಏಪ್ರಿಲ್ 2016 (16:59 IST)
ತೈವಾನ್ ಮೂಲದ ಸ್ಮಾರ್ಟ್‌ಪೋನ್ ಮತ್ತು ನೋಟ್‌ಬುಕ್ ತಯಾರಿಕಾ ಸಂಸ್ಥೆ ಆಸುಸ್, ಭಾರತದ ಮಾರುಕಟ್ಟೆಗೆ ಕಡಿಮೆ ಬೆಲೆಯ ಜೆನ್‌ಪೋನ್ ಗೋ ಆವೃತ್ತಿಯ ಸ್ಮಾರ್ಟ್‌ಪೋನ್‌‌ಗಳನ್ನು ಬಿಡುಗಡೆ ಮಾಡಿದೆ. ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 3ಜಿ ಸೌಲಭ್ಯದ ಜೊತೆಗೆ 4.5 ಇಂಚಿನ ಸ್ಕ್ರೀನ್ ಹೊಂದಿದೆ.
ಜೆನ್‌ಪೋನ್ ಗೋ 4.5 ಆವೃತ್ತಿಗಳು 2 ನೇ ಪೀಳಿಗೆಯ ಸ್ಮಾರ್ಟ್‌ಪೋನ್‌ಗಳಾಗಿದ್ದು, ಝಡ್‌ಬಿ452ಕೆಜಿ ಆವೃತ್ತಿಗಳು ಆನ್‌ಲೈನ್‌ ಮಾರುಕಟ್ಟೆಗಳಾದ ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್, ಅಮೆಜಾನ್, ಪೇಟಿಎಮ್, ಶಾಪ್‌ಕ್ಲೂಸ್ ಮತ್ತು ಅಸುಸ್ ಅಧಿಕೃತ ಮಳಿಗೆಯಲ್ಲಿ ಮಾರಾಟಕ್ಕೆ ಲಭ್ಯವಿದೆ.
 
ಜೆನ್‌ಪೋನ್ ಗೋ ಸ್ಮಾರ್ಟ್‌ಪೋನ್‌ಗಳು ಎರಡು ಮಾದರಿಯಲ್ಲಿ ಲಭ್ಯವಿದ್ದು, 0.3 ಮೆಗಾ ಪಿಕ್ಸೆಲ್ + 5 ಮೆಗಾ ಪಿಕ್ಸೆಲ್ (ಫ್ರಂಟ್ ಮತ್ತು ರಿಯರ್ ಕ್ಯಾಮೆರಾ) ಹೊಂದಿರುವ ಆವೃತ್ತಿಗಳು 5,299 ರೂಪಾಯಿ ಬೆಲೆಯಲ್ಲಿ ಲಭ್ಯವಿದ್ದು, 2 ಮೆಗಾ ಪಿಕ್ಸೆಲ್ + 8 ಮೆಗಾ ಪಿಕ್ಸೆಲ್ (ಫ್ರಂಟ್ ಮತ್ತು ರಿಯರ್ ಕ್ಯಾಮೆರಾ) ಹೊಂದಿರುವ ಆವೃತ್ತಿಗಳು 5,699 ರೂಪಾಯಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
 
ಅಸುಸ್ ಸಂಸ್ಥೆ, ಕಡಿಮೆ ಬೆಲೆಯಲ್ಲಿ ಐಶಾರಾಮಿ ಸೇವೆಯನ್ನು ನೀಡುವ ಉದ್ದೇಶದಿಂದ ಜೆನ್‌ಪೋನ್ ಗೋ 4.5 ಆವೃತ್ತಿಯ 2 ನೇ ಪೀಳಿಗೆಯಯ ಸ್ಮಾರ್ಟ್‌ಪೋನ್‌ಗಳನ್ನು ಸಿದ್ಧ ಪಡಿಸಲಾಗಿದೆ ಎಂದು ಆಸುಸ್ ಇಂಡಿಯಾ (ದಕ್ಷಿಣ ಏಷ್ಯಾ) ಪ್ರಾದೇಶಿಕ ಮುಖ್ಯಸ್ಥ ಪೀಟರ್ ಚಾಂಗ್ ಹೇಳಿದ್ದಾರೆ.
 
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಲೋ-ಲೈಟ್ ಮೋಡ್, ಬ್ಯಾಕ್‌ಲೈಟ್ (ಎಚ್‌ಡಿಆರ್) ಮೋಡ್, ಜಿರೋ-ಶಟ್ಟರ್ ಲಾಗ್ ಮತ್ತು ಸುಧಾರಿತ ಚಿತ್ರಗಳನ್ನು ನೀಡಲು ಬ್ಯೂಟಿಫಿಕೇಶನ್ ಮೋಡ್ ವೈಶಿಷ್ಟ್ಯವನ್ನು ಹೊಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments