Select Your Language

Notifications

webdunia
webdunia
webdunia
webdunia

ಕೆಲವು ರೂಪದ ಲಂಚವು ಅಂಗೀಕಾರಾರ್ಹ: ಶೇ. 66 ಉದ್ಯಮಗಳ ನಂಬಿಕೆ

ಕೆಲವು ರೂಪದ ಲಂಚವು ಅಂಗೀಕಾರಾರ್ಹ: ಶೇ. 66 ಉದ್ಯಮಗಳ ನಂಬಿಕೆ
ಮುಂಬೈ , ಶುಕ್ರವಾರ, 22 ಮೇ 2015 (15:24 IST)
ದೇಶದಲ್ಲಿ ಶೇ. 66 ಉದ್ಯಮಗಳು ಕೆಲವು ರೂಪದ  ಲಂಚವು   ಅಂಗೀಕಾರಾರ್ಹ ಎಂದು ನಂಬಿವೆ. ಭ್ರಷ್ಚಾಚಾರದ ವಿರುದ್ಧ ಸಾರ್ವಜನಿಕ ಆಕ್ರೋಶ ಹಾಗೂ ಅದರ ತಡೆ ನಿಯಂತ್ರಣ ಕ್ರಮಗಳ ನಡುವೆಯೂ ಸಮೀಕ್ಷೆಯೊಂದು ಮೇಲಿನಂತೆ ತಿಳಿಸಿದೆ.

 ಭ್ರಷ್ಟಾಚಾರ ಈಗಲೂ ವ್ಯಾಪಕವಾಗಿ ಹಬ್ಬಿದೆ ಎಂದು ಶೇ. 80ರಷ್ಟು ಜನರು ನಂಬಿದ್ದಾರೆ ಮತ್ತು ಶೇ. 52ರಷ್ಟು ಜನರು  ಉದ್ಯಮಗಳ ಯಶಸ್ಸಿಗೆ ಉಡುಗೊರೆಗಳನ್ನು ನೀಡುವುದು  ಸಮರ್ಥನೀಯ ಎಂದು ನಂಬಿದ್ದಾರೆ ಮತ್ತು ಶೇ. 27ರಷ್ಟು ಜನರು ಲಂಚದ ಹಣ ನೀಡುವುದನ್ನು ಸಮರ್ಥಿಸಿಕೊಂಡಿದ್ದಾರೆ.  ಅರ್ನೆಸ್ಟ್ ಮತ್ತು ಯಂಗ್ ಸಂಸ್ಥೆಯ ವಂಚನೆ ಮತ್ತು ಭ್ರಷ್ಟಾಚಾರ ಕುರಿತ ಸಮೀಕ್ಷೆಯಲ್ಲಿ ಈ ವಿಷಯಗಳು ಬೆಳಕಿಗೆ ಬಂದಿದೆ. 
 
ಆದರೆ ಶೇ. 35ರಷ್ಟು ಉದ್ಯಮಿಗಳು ಸಂಸ್ಥೆಯ ಲಂಚ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ನೀತಿಗಳಿಗೆ ಹೊಂದಾಣಿಕೆಯು ಮಾರುಕಟ್ಟೆಯ ಸ್ಪರ್ಧೆಗೆ ಹಾನಿ  ಉಂಟುಮಾಡುತ್ತದೆಂದು ನಂಬಿದ್ದಾರೆ. ಸಮೀಕ್ಷೆಯಲ್ಲಿ 38 ರಾಷ್ಟ್ರಗಳ 3800 ಜನರನ್ನು ಯೂರೋಪ್, ಮಧ್ಯಪ್ರಾಚ್ಯ, ಭಾರತ ಮತ್ತು ಆಫ್ರಿಕಾದಲ್ಲಿ ಸಂದರ್ಶಿಸಲಾಗಿದೆ. 
 

Share this Story:

Follow Webdunia kannada