Webdunia - Bharat's app for daily news and videos

Install App

Arecanut Price: ಅಡಿಕೆ, ಕೊಬ್ಬರಿ ಬೆಲೆ ಇಳಿಕೆ, ಕಾಳುಮೆಣಸು, ಕೊಬ್ಬರಿ ಎಷ್ಟಾಗಿದೆ ನೋಡಿ

Krishnaveni K
ಶನಿವಾರ, 5 ಜುಲೈ 2025 (13:58 IST)
ಬೆಂಗಳೂರು: ಅಡಿಕೆ ಬೆಳೆಗಾರರಿಗೆ ಇಂದೂ ನಿರಾಸೆಯೇ ಗತಿಯಾಗಿದೆ. ಬೆಲೆ ಏರಿಕೆ ನಿರೀಕ್ಷೆಗಳು ಸುಳ್ಳಾಗಿದ್ದು ಕೆಲವು ವರ್ಗದ ಅಡಿಕೆ ಬೆಲೆ ಇಳಿಕೆಯಾಗಿದೆ. ಆದರೆ ಕಾಳು ಮೆಣಸು, ಕೊಬ್ಬರಿ ಬೆಲೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ವಾರದ ಆರಂಭದಲ್ಲೇ ಇಳಿಕೆಯಾಗಿ ರೈತರಿಗೆ ನಿರಾಸೆಯಾಗಿತ್ತು. ಆದರೆ ಈಗ ಎರಡು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ ಬೆಲೆ ಮೊನ್ನೆಯಿಂದ 475 ರೂ.ಗಳಷ್ಟಿದೆ. ಇಂದೂ ಅದೇ ಬೆಲೆ ಮುಂದುವರಿದಿದೆ. ಹಳೆ ಅಡಿಕೆ ಬೆಲೆ ಹಲವು ದಿನಗಳಿಂಧ ಯಥಾ ಸ್ಥಿತಿಯಲ್ಲಿದೆ.  ಹಳೆ ಅಡಿಕೆ ಬೆಲೆ ಇಂದೂ ಗರಿಷ್ಠ 525 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 525 ರೂ.ಗಳಾಗಿವೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರ ತಲಾ 370 ರೂ.ಗಳಷ್ಟಿತ್ತು. ಕಳೆದ ಕೆಲವು ದಿನಗಳಿಂದ ಇವೆರಡರ ಬೆಲೆಯೂ ಅದೇ ಸ್ಥಿತಿಯಲ್ಲಿದೆ.  ಹೊಸ ಉಳ್ಳಿ ದರದಲ್ಲಿ ಇಳಿಕೆಯಾಗಿದೆ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 225 ರೂ.ಗಳಾಗಿದೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ತಲಾ 5 ರೂ. ಇಳಿಕೆಯಾಗಿದೆ. ಇವೆರಡರ ದರ ಈಗ 275 ರೂ.ಗೆ ಬಂದು ತಲುಪಿದೆ.

ಕಾಳುಮೆಣಸು, ಕೊಬ್ಬರಿ ದರ
ಆದರೆ ಕೊಬ್ಬರಿ ಮತ್ತು ಕಾಳುಮೆಣಸು ಬೆಳೆಗಾರರಿಗೆ ಇಂದು ಬಂಪರ್ ಸುದ್ದಿ. ಕಾಳುಮೆಣಸು ದರದಲ್ಲೂ ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು. 5 ರೂ. ಏರಿಕೆಯಾಗಿದ್ದು 655 ರೂ.ಗಳಷ್ಟಿವೆ. ಏರುಗತಿಯಲ್ಲಿದ್ದ ಕೊಬ್ಬರಿ ಬೆಲೆ ಇಂದು ದಿಡೀರ್ 15 ರೂ. ಇಳಿಕೆಯಾಗಿದೆ.  ಒಣ ಕೊಬ್ಬರಿ ಬೆಲೆ ಇಂದು 260 ರೂ.ಗಳಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಷಾಢ ಶುಕ್ರವಾರ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ತೇಜಸ್ವಿ ಸೂರ್ಯ ದಂಪತಿ: ವಿಡಿಯೋ

ಸ್ಯಾನಿಟರಿ ಪ್ಯಾಡ್ ನಲ್ಲೂ ರಾಹುಲ್ ಗಾಂಧಿ ಫೋಟೋ: ಟ್ರೋಲ್ ಆದ ಕಾಂಗ್ರೆಸ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಅಹ್ಮದಾಬಾದ್ ವಿಮಾನ ಪತನ: ಸಂತ್ರಸ್ತರಿಗೆ ಹಣ ನೀಡಲು ಏರ್ ಇಂಡಿಯಾ ಕಳ್ಳಾಟವಾಡುತ್ತಿದೆಯೇ

ಕೊವಿಡ್ ಲಸಿಕೆಯಿಂದ ಹೃದಯಾಘಾತವಾಗ್ತಿರೋದು ನಿಜಾನಾ: ತಜ್ಞರ ಸಮಿತಿ ವರದಿ ಲೀಕ್

ಮುಂದಿನ ಸುದ್ದಿ
Show comments