Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Krishnaveni K
ಗುರುವಾರ, 3 ಜುಲೈ 2025 (11:00 IST)
ಬೆಂಗಳೂರು: ಸತತ ಎರಡು ದಿನ ಇಳಿಕೆಯತ್ತ ಸಾಗಿದ್ದ ಅಡಿಕೆ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. ಹಾಗಿದ್ದರೂ ನಿರೀಕ್ಷಿಸಿದ ಬೆಲೆಯಿಲ್ಲದೇ ರೈತರಿಗೆ ನಿರಾಸೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ಮೊನ್ನೆಯಷ್ಟೇ ಏರಿಕೆಯಾಗಿದ್ದ ಅಡಿಕೆ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ವಾರದ ಆರಂಭದಲ್ಲೇ ಇಳಿಕೆಯಾಗಿ ರೈತರಿಗೆ ನಿರಾಸೆಯಾಗಿತ್ತು. ಹೊಸ ಅಡಿಕೆ ಬೆಲೆ ನಿನ್ನೆ 10 ರೂ.ಗಳಷ್ಟು ಇಳಿಕೆಯಾಗಿದ್ದು 475 ರೂ.ಗೆ ಬಂದು ನಿಂತಿದೆ. ಇಂದೂ ಅದೇ ಬೆಲೆ ಮುಂದುವರಿದಿದೆ. ಹಳೆ ಅಡಿಕೆ ಬೆಲೆ ಏರಿಕೆ-ಇಳಿಕೆಯಾಗದೇ ಗರಿಷ್ಠ 525 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 525 ರೂ.ಗಳಾಗಿವೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರ ತಲಾ 370 ರೂ.ಗಳಷ್ಟಿತ್ತು. ವಾರಂತ್ಯದಲ್ಲಿ ಇವೆರಡರ ಬೆಲೆ ಇಂದೂ ಅದೇ ಸ್ಥಿತಿಯಲ್ಲಿದೆ.  ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು.  ಆದರೆ ಮೊನ್ನೆ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 10 ರೂ.ಗಳಷ್ಟು ಇಳಿಕೆಯಾಗಿ 230 ರೂ.ಗಳಾಗಿತ್ತು. ಇಂದೂ ಅದೇ ಬೆಲೆಯಿದೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ಭಾರೀ ಇಳಿಕೆಯಾಗಿದೆ. ತಲಾ 290 ರೂ.ಆಗಿದ್ದ ಇವೆರಡರ ದರ ಈಗ 285 ರೂ.ಗೆ ಬಂದು ತಲುಪಿದೆ.

ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ದರದಲ್ಲೂ ಬಹಳ ದಿನಗಳ ನಂತರ ಕೊಂಚ ಏರಿಕೆಯಾಗಿತ್ತು. ಇಂದು ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ 650 ರೂ.ಗಳಷ್ಟಿವೆ. ಏರುಗತಿಯಲ್ಲಿದ್ದ ಕೊಬ್ಬರಿ ಬೆಲೆಯೂ ಯಥಾಸ್ಥಿತಿ ಕಾಯ್ದುಕೊಂಡಿದೆ.  ಒಣ ಕೊಬ್ಬರಿ ಬೆಲೆ ಇಂದು 275 ರೂ.ಗಳಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ಭಯೋತ್ಪಾದನಾ ದಾಳಿ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಹೆದರಿ ನಾಲ್ಕನೇ ಫ್ಲೋರ್‌ನಿಂದ ಹಾರಿದ್ರಾ ಯುವತಿ

ಮಹಿಳೆಯರಿರುವುದು ಗಂಡನ ಜತೆ ಮಲಗುವುದಕ್ಕೆ: ಕೇರಳ ಸಿಪಿಎಂ ಮುಖಂಡನ ವಿವಾದಾತ್ಮಕ ಹೇಳಿಕೆ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮುಂದಿನ ಸುದ್ದಿ
Show comments