Webdunia - Bharat's app for daily news and videos

Install App

Arecanut price: ಹೊಸ ಅಡಿಕೆಗೆ ಮತ್ತೆ ಬೆಲೆ ಇಳಿಕೆ, ಬೆಳೆಗಾರರಿಗೆ ನಿರಾಸೆ

Krishnaveni K
ಬುಧವಾರ, 2 ಜುಲೈ 2025 (10:36 IST)
ಬೆಂಗಳೂರು: ವಿಪರೀತ ಮಳೆ, ಬೆಳೆಗೆ ಔಷಧಿ ಹೊಡೆಯಲೂ ಪರದಾಡಬೇಕಾದ ಸ್ಥಿತಿ ಮಧ್ಯೆ ಅಡಿಕೆ ಬೆಳೆಗಾರರಿಗೆ ಈಗ ಬೆಲೆ ಇಳಿಕೆಯ ಬಿಸಿ ತಟ್ಟಿದೆ. ಇಂದು ಹೊಸ ಅಡಿಕೆಗೆ ಮತ್ತೆ ಬೆಲೆ ಇಳಿಕೆಯಾಗಿದ್ದು ರೈತರ ಮೊಗದಲ್ಲಿ ಚಿಂತೆಗೆ ಕಾರಣವಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ಮೊನ್ನೆಯಷ್ಟೇ ಏರಿಕೆಯಾಗಿದ್ದ ಅಡಿಕೆ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ವಾರದ ಆರಂಭದಲ್ಲೇ ಏರಿಕೆ ಬಿಡಿ ಇಳಿಕೆಯಾಗಿದ್ದು ರೈತರಿಗೆ ನಿರಾಸೆಯಾಗಿದೆ. ಹೊಸ ಅಡಿಕೆ ಬೆಲೆ ಕಳೆದ ಕೆಲವು ದಿನಗಳಿಂದ  485 ರೂ.ಗಳಷ್ಟಿತ್ತು. ಆದರೆ ಇಂದು 10 ರೂ.ಗಳಷ್ಟು ಇಳಿಕೆಯಾಗಿದ್ದು 475 ರೂ.ಗೆ ಬಂದು ನಿಂತಿದೆ. ಹಳೆ ಅಡಿಕೆ ಬೆಲೆ ಏರಿಕೆ-ಇಳಿಕೆಯಾಗದೇ ಗರಿಷ್ಠ 525 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 525 ರೂ.ಗಳಾಗಿವೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರ ತಲಾ 370 ರೂ.ಗಳಷ್ಟಿತ್ತು. ವಾರಂತ್ಯದಲ್ಲಿ ಇವೆರಡರ ಬೆಲೆ ಇಂದೂ ಅದೇ ಸ್ಥಿತಿಯಲ್ಲಿದೆ.  ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು.  ಆದರೆ ಮೊನ್ನೆ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 10 ರೂ.ಗಳಷ್ಟು ಇಳಿಕೆಯಾಗಿ 230 ರೂ.ಗಳಾಗಿತ್ತು. ಇಂದೂ ಅದೇ ಬೆಲೆಯಿದೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ಭಾರೀ ಇಳಿಕೆಯಾಗಿದೆ. ತಲಾ 290 ರೂ.ಆಗಿದ್ದ ಇವೆರಡರ ದರ ಈಗ 285 ರೂ.ಗೆ ಬಂದು ತಲುಪಿದೆ.

ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ದರದಲ್ಲೂ ಬಹಳ ದಿನಗಳ ನಂತರ ಕೊಂಚ ಏರಿಕೆಯಾಗಿತ್ತು. ಇಂದು ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ 650 ರೂ.ಗಳಷ್ಟಿವೆ. ಏರುಗತಿಯಲ್ಲಿದ್ದ ಕೊಬ್ಬರಿ ಬೆಲೆಯೂ ಯಥಾಸ್ಥಿತಿ ಕಾಯ್ದುಕೊಂಡಿದೆ.  ಒಣ ಕೊಬ್ಬರಿ ಬೆಲೆ ಇಂದು 275 ರೂ.ಗಳಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಮತ್ತೆ ಲಕ್ಷದ ಗಡಿ ದಾಟಿದ ಚಿನ್ನದ ಬೆಲೆ

ಆಟೋ ದರ ಏರಿಕೆಗೆ ಸರ್ಕಾರದ ಸಿದ್ಧತೆ: ಹಿಂಗಾದ್ರೆ ಬದುಕೋದು ಹೇಗೆ ಸರ್ ಎಂದ ಜನ

ರೈಲು ದರ ಹೆಚ್ಚಿಸಿದ್ದು ಸರಿಯಲ್ಲ ಸಿದ್ದರಾಮಯ್ಯ: ಬಿಎಂಟಿಸಿಯಲ್ಲಿ ಕೋಟ್ಯಾಧಿಪತಿಗಳು ಹೋಗ್ತಾರಾ ಎಂದ ನೆಟ್ಟಿಗರು

ಸಾಮಾನ್ಯರು ಸಂಚರಿಸುವ ರೈಲು ಪ್ರಯಾಣ ದರ ಏರಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ

ಹೃದಯದ ಆರೋಗ್ಯಕ್ಕಾಗಿ ಇದೊಂದು ಉಸಿರಾಟದ ವ್ಯಾಯಾಮ ಮಾಡಿ

ಮುಂದಿನ ಸುದ್ದಿ
Show comments