ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿ 10 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು ಸದ್ಯದಲ್ಲೇ ಅಲ್ಲಿ ತಾವು ಬಳಸುವ ವಿದೇಶಿ ಮೊಬೈಲ್ ಸಂಖ್ಯೆಗಳ ಹಣ ವರ್ಗಾವಣೆ ಮಾಡಬಹುದು. ಭಾರತದಲ್ಲಿ ಬಳಕೆಯಲ್ಲಿರುವ UPI ಆ್ಯಪ್ಗಳಲ್ಲಿ ನೋಂದಾಯಿಸಿಕೊಂಡು ಹಣ ವ್ಯವಹಾರಗಳನ್ನು ನಡೆಸುವ ಅನುಕೂಲ ಸಿಗಲಿದೆ. 2023ರ ಏಪ್ರಿಲ್ 30ರಿಂದ ಈ ಸೌಲಭ್ಯ ಜಾರಿಗೆ ಬರಲಿದೆ. ಈ ಕುರಿತಂತೆ, UPI ಅಭಿವೃದ್ಧಿಪಡಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯು ಪ್ರಕಟಣೆಯನ್ನು ನೀಡಿದೆ. UAE ಸೇರಿ ವಿಶ್ವದ 10 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು, ತಾವು ಬಳಸುವ NRE ಅಥವಾ NRO ಮಾದರಿಯ ಬ್ಯಾಂಕ್ ಖಾತೆಗಳಿಗೆ ಜೋಡಿಸಲ್ಪಟ್ಟಿರುವ ಆ ದೇಶಗಳ ಮೊಬೈಲ್ ನಂಬರ್ಗಳನ್ನು ಬಳಸಿ UPI ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಆ ನಂಬರ್ಗಳನ್ನು ಬಳಸಿಯೇ ಹಣದ ವಹಿವಾಟು ನಡೆಸಬಹುದು ಎಂದು ಹೇಳಿದೆ.