Webdunia - Bharat's app for daily news and videos

Install App

ಆಪಲ್ ಏರ್‌ಪಾಡ್ಸ್‌ನಲ್ಲಿ ಬ್ಯಾಟರಿ ಸಮಸ್ಯೆ

Webdunia
ಶುಕ್ರವಾರ, 30 ಡಿಸೆಂಬರ್ 2016 (11:24 IST)
ಆಪಲ್ ಕಂಪನಿ ತನ್ನ ಗ್ರಾಹಕರಿಗೆ ವಿನೂತನ ತಾಂತ್ರಿಕತೆಯನ್ನು ಕೊಡುವುದರಲ್ಲಿ ಸದಾ ಮುಂದಿದೆ. ಈ ಸಲ ವೈರ್‌ಲೆಸ್ ಇಯರ್‌ಫೋನ್ ಏರ್‌ಪಾಡ್ಸ್ ಹೊರತಂದಿದ್ದು ಗೊತ್ತೇ ಇದೆ. ಐಫೋನ್ 7, 7ಪ್ಲಸ್ ಮಾಡೆಲ್‌ಗಳಿಗೆ 3.5 ಎಂ.ಎಂ ಜಾಕ್ ಬದಲಾಗಿ ಆಪಲ್ ಏರ್‌ಪಾಡ್ಸನ್ನು ಬಿಡುಗಡೆ ಮಾಡಿತ್ತು.
 
ಆದರೆ ಈ ಏರ್‌ಪಾಡ್ಸಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಕೆಲವು ಮಂದಿ ಗ್ರಾಹಕರು ಈ ಬಗ್ಗೆ ದೂರು ನೀಡುತ್ತಿದ್ದಾರೆ. ಏರ್‌ಪಾಡ್ಸ್ ಜೊತೆಗೆ ಕೊಟ್ಟಂತ ಕೇಸ್‌ನಲ್ಲಿ ಇಯರ್‌ಫೋನನ್ನು ಇಟ್ಟು ಚಾರ್ಚ್ ಮಾಡಿಕೊಳ್ಳಬೇಕಾಗುತ್ತದೆ. 4-5 ಗಂಟೆಗಳ ಕಾಲ ಚಾರ್ಚ್‍ ಮಾಡಿದರೆ ಸುಮಾರು 24 ಗಂಟೆಗಳ ಕಾಲ ಕೇಸ್ ಕೆಲಸ ಮಾಡುತ್ತದೆ ಎಂದು ಆಪಲ್ ಕಂಪನಿ ಹೇಳಿತ್ತು.
 
ಆದರೆ ಈ ಬಗ್ಗೆ ಗ್ರಾಹಕರು ಅಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಉಪಯೋಗಿಸದೆ ಸ್ಟ್ಯಾಂಡ್‍ಬೈ ಸಮಯದಲ್ಲೇ ಏರ್‌ಪಾಡ್ಸ್ ಕೇಸ್ ಬ್ಯಾಟರಿ ಖರ್ಚಾಗುತ್ತಿದೆ ಎನ್ನುತ್ತಿದ್ದಾರೆ. ಸಮಸ್ಯೆ ಇರುವ ಏರ್‌ಪಾಡ್‌ಗಳನ್ನು ಬದಲಾಯಿಸಿಕೊಡುತ್ತಿದೆ ಕಂಪನಿ. ಆದರೆ ತಯಾರಿಕೆಯಲ್ಲೇ ಲೋಪ ಇದೆ ಎಂದು, ಚಿಪ್‌ಸೆಟ್ ಬಳಿ ಗುಣಮಟ್ಟದ ಸೋಲ್ಡರಿಂಗ್ ಮಾಡದೆ ಇರುವುದಕ್ಕೇ ಈ ಸಮಸ್ಯೆ ಎಂದು ಟೆಕ್ ನಿಪುಣರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಎಲ್ಲೆಲ್ಲಿ ಇಲ್ಲಿದೆ ವಿವರ

ಸುಂದರವಾಗಿದ್ದಳೆಂದು ತಲೆ ಬೋಳಿಸಿ, ವರದಕ್ಷಿಣೆ ಕಿರುಕುಳ: ಯುಎಇಯಲ್ಲಿ ಮಗುವಿನೊಂದಿಗೆ ಕೇರಳ ಮಹಿಳೆ ಆತ್ಮಹತ್ಯೆ

ಶುಭಾಂಶು ಶುಕ್ಲ ಬದಲು ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

ಬೆಂಗಳೂರು, ನೋಟ್ಸ್ ನೀಡು ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಬ್ಬರು, ಸ್ನೇಹಿತನಿಂದ ರೇಪ್‌

ಮಂತ್ರಾಲಯಕ್ಕೆ ಭೇಟಿ ನೀಡಿದ ಬಳಿಕ ಪೀಠಾಧಿಪತಿಯರನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ

ಮುಂದಿನ ಸುದ್ದಿ
Show comments