Select Your Language

Notifications

webdunia
webdunia
webdunia
webdunia

ಏರ್‌ಸೆಲ್- ಮ್ಯಾಕ್ಸಿಸ್ ಪ್ರಕರಣ: ದಯಾನಿಧಿ ಮಾರನ್ 742 ಕೋಟಿ ರೂ. ಆಸ್ತಿ ಜಫ್ತಿ

ಏರ್‌ಸೆಲ್- ಮ್ಯಾಕ್ಸಿಸ್  ಪ್ರಕರಣ: ದಯಾನಿಧಿ ಮಾರನ್ 742 ಕೋಟಿ ರೂ. ಆಸ್ತಿ ಜಫ್ತಿ
ನವದೆಹಲಿ , ಬುಧವಾರ, 1 ಏಪ್ರಿಲ್ 2015 (18:45 IST)
ಏರ್‌ಸೆಲ್ -ಮ್ಯಾಕ್ಸಿಸ್ ಪ್ರಕರಣದಲ್ಲಿ ಹಣದ ಅವ್ಯವಹಾರ ಆರೋಪಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ದಯಾನಿಧಿ ಮಾರನ್ ಅವರ 742 ಕೋಟಿ ರೂ. ಆಸ್ತಿಯನ್ನು ಜಫ್ತಿ ಮಾಡಿದೆ.
 
ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಮಾರನ್ ಸಹೋದರರು ಲಂಚದ ರೂಪದಲ್ಲಿ ಪಡೆದ ಹಣ ಪಡೆದಿದ್ದಾರೆಂದು ಆರೋಪಿಸಿದ್ದು, ಈ ಹಣದ ಮೊತ್ತಕ್ಕೆ ಜಾರಿ ನಿರ್ದೇಶನಾಲಯ ಜಫ್ತಿ ಮಾಡಿದ ಆಸ್ತಿಯ ಮೊತ್ತ ಸಮನಾಗಿದೆ. 
 
ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಆಗ ಟೆಲಿಕಾಂ ಸಚಿವರಾಗಿದ್ದ ದಯಾನಿಧಿ ಮಾರನ್ ಅವರು ಉದ್ಯಮಿ ಶಿವಶಂಕರನ್ ಅವರಿಗೆ ಏರ್‌ಸೆಲ್ ಟೆಲಿಕಾಂ ಕಂಪನಿಯನ್ನು ಮಲೇಶಿಯಾ ಮೂಲದ ಮ್ಯಾಕ್ಸಿಸ್‌ಗೆ ಮಾರಾಟ ಮಾಡುವಂತೆ ಒತ್ತಡ ಹೇರಿದ್ದರು.
 
ಮ್ಯಾಕ್ಸಿಸ್ ಕಂಪನಿಯ ಹಣಕಾಸು ವಹಿವಾಟುಗಳ ಆಧಾರದ ಮೇಲೆ ಸಿಬಿಐ ಮಾರನ್ ಸಹೋದರರನ್ನು ಬಲೆಗೆ ಬೀಳಿಸಿತ್ತು. ಯುಕೆ ಮೂಲದ ಮ್ಯಾಕ್ಸಿಸ್ ಸಹಾಯಕ ಸಂಸ್ಥೆ ಮಾರನ್ ಮಾಲೀಕತ್ವದ ಸನ್ ಡೈರೆಕ್ಟ್ ಪ್ರೈ. ಲಿ. ಸಂಸ್ಥೆಯಲ್ಲಿ ಪ್ರೀಮಿಯಂ ದರದಲ್ಲಿ  629 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿತ್ತು. 

Share this Story:

Follow Webdunia kannada