Select Your Language

Notifications

webdunia
webdunia
webdunia
webdunia

100 ರೂಪಾಯಿಗೆ ಏರ್ ಇಂಡಿಯಾ ಟಿಕೆಟ್, ಇಂದಿನಿಂದ ಬುಕ್ಕಿಂಗ್

100 ರೂಪಾಯಿಗೆ ಏರ್ ಇಂಡಿಯಾ ಟಿಕೆಟ್, ಇಂದಿನಿಂದ ಬುಕ್ಕಿಂಗ್
ನವದೆಹಲಿ , ಬುಧವಾರ, 27 ಆಗಸ್ಟ್ 2014 (13:36 IST)
ಇಂಡಿಯನ್ ಏರ್‌ಲೈನ್ಸ್ ಜತೆ ವಿಲೀನವಾದ ದಿನದ ನೆನಪಿಗಾಗಿ ಬುಧವಾರ 'ಏರ್ ಇಂಡಿಯಾ ದಿನ'  ಆಚರಿಸುತ್ತಿರುವ ಏರ್ ಇಂಡಿಯಾ, ರಾಷ್ಟ್ರೀಯ ವೈಮಾನಿಕ ಸಾರಿಗೆ ಸಂಸ್ಥೆ ತನ್ನ ಸಂಭ್ರಮವನ್ನು  ಕೇವಲ 100 ರೂಪಾಯಿಗೆ ಟಿಕೆಟ್ ನೀಡುವ ಮೂಲಕ ಆಚರಿಸಿಕೊಳ್ಳುತ್ತಿದೆ, ಸೀಮಿತ ಅವಧಿಗೆ ಈ ಆಫರ್ ಜಾರಿಯಲ್ಲಿರಲಿದೆ. 

ಏರ್‌ಲೈನ್ಸ್ ಇದೇ ಪ್ರಥಮ ಬಾರಿಗೆ 'ಏರ್ ಇಂಡಿಯಾ ದಿನ' ವನ್ನು ಆಚರಿಸುತ್ತಿದೆ. ಈ ಕಾರಣಕ್ಕೆ  ಸಮಾರಂಭವನ್ನು ಆಯೋಜಿಸಲಾಗಿದ್ದು, ಸಂಸ್ಥೆಯಲ್ಲಿ ಶ್ಲಾಘನೀಯ  ಸೇವೆ ಸಲ್ಲಿಸಿದವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. 
 
ಆಗಸ್ಟ್ 27, 2007 ರಂದು "ಏರ್ ಇಂಡಿಯಾ"  ಹಿಂದಿನ ಇಂಡಿಯನ್ ಏರ್‌ಲೈನ್ಸ್  ಜೊತೆ ವಿಲೀನಗೊಂಡಿತ್ತು. 
 
ಈ ಸಂದರ್ಭದಲ್ಲಿ, 'ಏರ್ ಇಂಡಿಯಾ ಆಫರ್' ಎಂಬ ಯೋಜನೆಯನ್ನು ಅದು ಪ್ರಾರಂಭಿಸಿದ್ದು ಇದರ ಪ್ರಕಾರ ಅನ್ವಯಿಸುವ ಇತರ ತೆರಿಗೆದರವನ್ನು ಹೊರತುಪಡಿಸಿ 100 ರೂಪಾಯಿಗೆ ಟಿಕೆಟ್ ನೀಡಲಾಗುವುದು.
 
ಈ ಟಿಕೆಟ್‌ಗಳ ಮಾರಾಟವನ್ನು ಏರ್‌ಲೈನ್ಸ್ ವೆಬ್‌ಸೈಟ್ ಮೂಲಕ ಮಾಡಲಾಗುತ್ತಿದ್ದು  ಆಗಸ್ಟ್ 27 ರಿಂದ ಸೆಪ್ಟೆಂಬರ್ 30ರವರೆಗಿನ ಪ್ರಯಾಣಕ್ಕೆ , ಆಗಸ್ಟ್ 27 ರಿಂದ 31 ರವರೆಗೆ 5 ದಿನಗಳ ಸೀಮಿತ ಅವಧಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದು. 

Share this Story:

Follow Webdunia kannada