Webdunia - Bharat's app for daily news and videos

Install App

ಏಸರ್‌ನಿಂದ ವಿಶ್ವದ ಅತ್ಯಂತ ತೆಳುವಾದ ಲ್ಯಾಪ್‌ಟಾಪ್ ಮಾರುಕಟ್ಟೆಗೆ

Webdunia
ಗುರುವಾರ, 1 ಸೆಪ್ಟಂಬರ್ 2016 (16:41 IST)
ಬರ್ಲಿನ್‌ನಲ್ಲಿ ನಡೆದ 2016 ನೇ ಸಾಲಿನ ಐಎಫ್‌ಎ ಸಮಾರಂಭದಲ್ಲಿ ತೈವಾನ್ ಮೂಲದ ದೈತ್ಯ ಏಸರ್ ಸಂಸ್ಥೆ, ವಿಶ್ವದ ಅತ್ಯಂತ ತೆಳುವಾದ ಕೇವಲ ಒಂದು ಸೆಂಟಿಮೀಟರ್ ದಪ್ಪವಿರುವ ಕನ್ವರ್ಟಿಬಲ್ ಸ್ಪೀನ್-7 ಆವೃತ್ತಿಯ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
 
ಸ್ಪೀನ್-7 ಆವೃತ್ತಿಯ ಲ್ಯಾಪ್‌ಟಾಪ್‌ಗಳು 10.98 ಮಿ.ಮೀಟರ್ ಸುತ್ತಳತೆ ಹಾಗೂ 1.2 ಕೆಜಿ ತೂಕವನ್ನು ಹೊಂದಿದ್ದು, ವಿಶ್ವದ ಅತೀ ತೆಳುವಾದ ಲ್ಯಾಪ್‌ಟಾಪ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.  
 
ಐಷಾರಾಮಿ ಸ್ಪೀನ್-7 ಆವೃತ್ತಿಯ ಲ್ಯಾಪ್‌ಟಾಪ್‌ಗಳು ಯಾವುದೇ ಅಡೆತಡೆಗಳಿಲ್ಲದೆ ಬಳಕೆದಾರರಿಗೆ ಉತ್ತಮ ಸೇವೆ ನೀಡಲಿದೆ ಎಂದು ಏಸರ್ ಇಂಕ್‌ನ, ಐಟಿ ಉತ್ಪನ್ನಗಳು ಉದ್ಯಮ, ವಾಣಿಜ್ಯ & ಡಿಟ್ಯಾಚೇಬಲ್ ನೋಟ್‌ಬುಕ್, ಜನರಲ್ ಮ್ಯಾನೇಜರ್ ಜೇಮ್ಸ್ ಲಿನ್ ತಿಳಿಸಿದ್ದಾರೆ.
 
ಸ್ಪೀನ್-7 ಆವೃತ್ತಿಯ ಲ್ಯಾಪ್‌ಟಾಪ್‌ಗಳು 14 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ ಜೊತೆಗೆ ರಕ್ಷಣೆಗಾಗಿ ಕಾರ್ನಿಂಗ್ ಗೋರಿಲಾ ಗ್ಲಾಸ್ ವಿಶೇಷತೆಯನ್ನು ಹೊಂದಿದೆ. ಅಲ್ಯೂಮಿನಿಯಂ ಯುನಿಬಾಡಿ ಜೊತೆಗೆ ಮ್ಯಾಟ್ ಬ್ಲ್ಯಾಕ್ ಚಾಸಿಸ್, ಪಾಲಿಶ್ಡ್ ಸಿಲ್ವರ್ ಹಿಂಗ್ಸ್ ಮತ್ತು ಡೈಮೆಂಡ್ ಕಟ್ ಎಡ್ಜ್‌ಗಳ ಮೂಲಕ ಈ ಪೋನ್‌ನ ಟಚ್‌ಪ್ಯಾಡ್ ಸುತ್ತಲು ವಿನ್ಯಾಸಗೊಳಿಸಲಾಗಿದೆ. 
 
ವಿಂಡೋಸ್ 10 ಆಧಾರಿತ ಈ ಹೊಸ ಆವೃತ್ತಿಯ ಲ್ಯಾಪ್‌ಟಾಪ್‌ಗಳು 7ನೇ ಪೀಳಿಗೆಯ ಇಂಟೆಲ್ ಕೋರ್ ಐ7 ಪ್ರೊಸೆಸರ್, 8ಜಿಬಿ ರ್ಯಾಮ್ ಹಾಗೂ 256 ಜಿಬಿ ಎಸ್‌ಎಸ್‌ಡಿ ಮೆಮೊರಿ ಸೌಲಭ್ಯವನ್ನು ಹೊಂದಿದೆ. 
 
ಈ ಹೊಸ ವೈಶಿಷ್ಟ್ಯದ ಲ್ಯಾಪ್‌ಟಾಪ್‌ಗಳು ಡ್ಯುಯಲ್ ಯುಎಸ್‌ಬಿ 3.1 ಬಗೆಯ ಸಿ ಪೋರ್ಟ್ ವಿಶೇಷದ ಜೊತೆಗೆ ಸಿಂಗಲ್ ಚಾರ್ಚ್‌ ಮೂಲಕ 8 ಗಂಟೆಯ ಬ್ಯಾಟರಿ ಸಾಮರ್ಥ್ಯವನ್ನು ಪಡೆಯಬಹುದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments