Webdunia - Bharat's app for daily news and videos

Install App

7ನೇ ವೇತನ ಆಯೋಗ: ಕೇಂದ್ರ ಸರಕಾರಿ ನೌಕರರ ಜುಲೈ 11 ರ ಪ್ರತಿಭಟನೆ ಮುಂದೂಡಿಕೆ

Webdunia
ಗುರುವಾರ, 7 ಜುಲೈ 2016 (19:34 IST)
ನವದೆಹಲಿ: 7ನೇ ವೇತನ ಆಯೋಗ ಶಿಫಾರಸ್ಸಿನಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಜುಲೈ 11 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದ ಕೇಂದ್ರ ಸರಕಾರಿ ನೌಕರರು, ಸಮಸ್ಯೆಗಳ ಪರಿಹಾರಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವ ಕೇಂದ್ರ ಭರವಸೆ ನೀಡಿದ ಹಿನ್ನೆಲೆಯಲ್ಲಿ ನೌಕರರ ಸಂಘಟನೆಗಳು ಪ್ರತಿಭಟನೆಯನ್ನು ನಾಲ್ಕು ತಿಂಗಳುಗಳ ಕಾಲ ಮುಂದೂಡಿವೆ ಎಂದು ಮೂಲಗಳು ತಿಳಿಸಿವೆ.  
 
ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸುವುದಾಗಿ ಭರವಸೆ ನೀಡಿರುವ ಸರಕಾರ, ಈ ಕುರಿತು ಪರಿಷ್ಕರಣೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದರಿಂದ ವೇತನ ಆಯೋಗದ ಶಿಫಾರಸುಗಳ ವಿರುದ್ಧ ಮುಷ್ಕರವನ್ನು ನಾಲ್ಕು ತಿಂಗಳು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಎನ್‌ಜೆಸಿಎ ಕೇಂದ್ರ ಸರ್ಕಾರಿ ನೌಕರರ ಸಂಘದ ಶಿವ ಗೋಪಾಲ್ ಮಿಶ್ರಾ ತಿಳಿಸಿದ್ದಾರೆ.
 
ಸಂಘಗಳ ಪ್ರತಿನಿಧಿಗಳು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಉನ್ನತ ಸಮಿತಿಯನ್ನು ರಚಿಸಲು ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
7ನೇ ವೇತನ ಆಯೋಗದ ಇತರೆ ಶಿಫಾರಸುಗಳನ್ನು ಒಳಗೊಂಡಂತೆ ಕೇಂದ್ರ ಸರಕಾರಿ ನೌಕರರ ವಿವಿಧ ಒಕ್ಕೂಟಗಳ ಸಮಸ್ಯೆಗಳ ಕುರಿತು ಸಮಿತಿ ಗಮನ ಹರಿಸಲಿದೆ ಎಂದು ತಿಳಿಸಿದ್ದಾರೆ.
 
ನೌಕರರ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸುವುದಾಗಿ ಸರಕಾರ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು 4 ತಿಂಗಳು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಮಿಶ್ರಾ ತಿಳಿಸಿದ್ದಾರೆ.
 
ಸರಕಾರಿ ನೌಕರರ ಸಂಘಟನೆಗಳ ಅಸಮಾಧಾನಗಳ ಕುರಿತು ನೂತನ ಉನ್ನತ ಸಮಿತಿ ಪರಿಷ್ಕೃರಣೆ ನಡೆಸಲಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಮುಂದಿನ ಸುದ್ದಿ
Show comments