Select Your Language

Notifications

webdunia
webdunia
webdunia
webdunia

ಸೂಪರ್ ರಿಚ್ ಜನರ ಸಂಖ್ಯೆ ಬೆಂಗಳೂರು ಸೇರಿ 7 ಭಾರತೀಯ ನಗರಗಳಲ್ಲಿ ವೃದ್ಧಿ

ಸೂಪರ್ ರಿಚ್ ಜನರ ಸಂಖ್ಯೆ ಬೆಂಗಳೂರು ಸೇರಿ  7 ಭಾರತೀಯ ನಗರಗಳಲ್ಲಿ ವೃದ್ಧಿ
ನವದೆಹಲಿ , ಮಂಗಳವಾರ, 31 ಮಾರ್ಚ್ 2015 (19:22 IST)
ವಾಣಿಜ್ಯ ನಗರಿ ಮುಂಬೈ, ರಾಜಕೀಯ ಕೇಂದ್ರ ದೆಹಲಿ  ಸೇರಿದಂತೆ ಏಳು ಭಾರತೀಯ ನಗರಗಳು ಬಹು ಮಿಲಿಯಾಧಿಪತಿಗಳ ಸಂಖ್ಯೆಯಲ್ಲಿ ಬೆಳವಣಿಗೆಗೆ ಸಂಬಂಧಿಸಿದಂತೆ ಅಗ್ರ 20 ಏಷ್ಯಾ ಪೆಸಿಫಿಕ್ ನಗರಗಳ ಪೈಕಿ ಹೆಸರಾಗಿವೆ. 
 
ಪುಣೆ, ಚೆನ್ನೈ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾ 20 ನಗರಗಳಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರೆ ನಗರಗಳು. ವಿಯಟ್ನಾಂನ ಹೊ ಚಿ ಮಿನ್ ನಗರ ಅಗ್ರಸ್ಥಾನ ಪಡೆದಿದೆ. 
 
ಮಿಲಿಯಾಧಿಪತಿ 1 ದಶಲಕ್ಷ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಆಸ್ತಿ ಹೊಂದಿರಬೇಕು. ಮಲ್ಟಿ ಮಿಲಿಯಾಧಿಪತಿ 10 ದಶಲಕ್ಷ ಡಾಲರ್‌ಗಿಂತ ಹೆಚ್ಚು ನಿವ್ವಳ ಆಸ್ತಿ ಹೊಂದಿರಬೇಕು. ಸೂಪರ್ ರಿಚ್ ಜನರಿರುವ ವೇಗವಾಗಿ ಬೆಳೆಯುವ ನಗರಗಳು ಎಂಬ ಹೆಸರಿನ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
 
ಪುಣೆಯು ಅತೀ ಶ್ರೀಮಂತ ಜನರಿಗೆ ಸಂಬಂಧಿಸಿದಂತೆ ಅತೀ ವೇಗದ ಬೆಳವಣಿಗೆ ಕಂಡಿದೆ. 2004ರಲ್ಲಿ 60 ಜನರಿದ್ದದ್ದು 2014ರಲ್ಲಿ ಸೂಪರ್ ರಿಚ್ 250ಕ್ಕೆ ಮುಟ್ಟಿದೆ. ಪುಣೆ ಬಳಿಕ ಮುಂಬೈನಲ್ಲಿ ಬಹು ಮಿಲಿಯಾಧಿಪತಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿದೆ. 

Share this Story:

Follow Webdunia kannada