Select Your Language

Notifications

webdunia
webdunia
webdunia
webdunia

30 ಸಾವಿರ ಸಮೀಪಿಸುತ್ತಿದೆ 10 ಗ್ರಾಂ ಚಿನ್ನದ ಬೆಲೆ!

30 ಸಾವಿರ ಸಮೀಪಿಸುತ್ತಿದೆ 10 ಗ್ರಾಂ ಚಿನ್ನದ ಬೆಲೆ!
ನವದೆಹಲಿ , ಮಂಗಳವಾರ, 6 ಸೆಪ್ಟಂಬರ್ 2011 (17:57 IST)
ಆರ್ಥಿಕ ಪ್ರಗತಿಯಲ್ಲಿ ತೀವ್ರ ಕುಸಿತ ಮತ್ತು ಯುರೋಪಿನ ಸಾಲಮರುಪಾವತಿ ಸಾಮರ್ಥ್ಯದ ಬಿಕ್ಕಟ್ಟಿನ ಪರಿಣಾಮ, ಸಾಗರೋತ್ತರ ವಹಿವಾಟಿನಲ್ಲಿ ಸುಭದ್ರ ಹೂಡಿಕೆಯಾಗಿ ಚಿನ್ನದ ಮೇಲೆ ಬೇಡಿಕೆ ಹೆಚ್ಚಿದ್ದರಿಂದ ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂ ಚಿನ್ನಕ್ಕೆ 29,091 ರೂಪಾಯಿಗೆ ಏರಿಕೆಯಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದಲ್ಲದೆ ಮುಂಬರುವ ಮದುವೆ ಸಮಾರಂಭಗಳಿಗೆ ಸ್ಥಳೀಯ ಖರೀದಿಯಲ್ಲಿ ಏರಿಕೆಯಾಗುತ್ತಿರುವುದು ಕೂಡ ಚಿನ್ನಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದ್ದು, ಚಿನ್ನ ಆಭರಣಗಳ ಬೆಲೆಯಲ್ಲೂ ತುಸು ಏರಿಕೆ ಕಂಡಿದ್ದು 8 ಗ್ರಾಂ.ಗೆ 100 ರೂಪಾಯಿ ಏರಿಕೆಯೊಂದಿಗೆ 22,800 ರೂಪಾಯಿಗೆ ಏರಿಕೆ ಕಂಡಿದೆ.

ಫೆಬ್ರವರಿ ತಿಂಗಳ ವಿತರಣೆಗಾಗಿರುವ ಚಿನ್ನದ ಬೆಲೆಯಲ್ಲಿ ಹತ್ತು ಗ್ರಾಂ.ಗೆ 156 ರೂಪಾಯಿ ಏರಿಕೆಯೊಂದಿಗೆ 29,091 ರೂಪಾಯಿಗೆ ತಲುಪಿದ್ದರೆ, ಅಕ್ಟೋಬರ್ ತಿಂಗಳ ವಿತರಣೆಗಾಗಿರುವ ಚಿನ್ನದಲ್ಲಿ 88 ರೂಪಾಯಿ ಏರಿಕೆಯೊಂದಿಗೆ 28,573 ರೂಪಾಯಿಗೆ ಏರಿಕೆಯಾಗಿದೆ.

ಇದೇ ರೀತಿ, ಡಿಸೆಂಬರ್ ವಿತರಣೆಗಾಗಿರುವ ಚಿನ್ನದ ಬೆಲೆಯಲ್ಲೂ 78 ರೂಪಾಯಿ ಏರಿಕೆಯೊಂದಿಗೆ 28,833 ರೂಪಾಯಿ ತಲುಪಿರುವುದು ಕಂಡುಬಂದಿದೆ.

ಆದರೆ ಜಾಗತಿಕ ಸಂಕಷ್ಟ ಸ್ಥಿತಿ ಬೆಳ್ಳಿ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಭೀರಿದ್ದು ಪ್ರತೀ ಕೆ.ಜಿಗೆ 400 ರೂಪಾಯಿ ಕುಸಿತದೊಂದಿಗೆ 65,100 ರೂಪಾಯಿಗೆ ತಲುಪಿದೆ.

ಯುರೋಪಿನ ಆರ್ಥಿಕ ಸಂಕಷ್ಟ ಸ್ಥಿತಿ ಮತ್ತು ಜಾಗತಿಕ ಆರ್ಥಿಕ ಪ್ರಗತಿ ಕುಂಠಿತವಾಗಿರುವುದರಿಂದ ಭೀತಿಗೊಳಗಾದ ಹೂಡಿಕೆದಾರರು ತಮ್ಮ ಸಂಪತ್ತನ್ನು ಚಿನ್ನದ ಮೇಲೆ ಹೂಡಲು ಒಲವು ತೋರಿರುವುದರಿಂದ ಈ ರೀತಿ ಬೆಲೆ ಏಕಾಏಕಿ ಗಗನಕ್ಕೇರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada