Select Your Language

Notifications

webdunia
webdunia
webdunia
webdunia

25 ಸಾವಿರ ಉದ್ಯೋಗಿಗಳ ನೇಮಕ: ಇನ್ಫೋಸಿಸ್

25 ಸಾವಿರ ಉದ್ಯೋಗಿಗಳ ನೇಮಕ: ಇನ್ಫೋಸಿಸ್
ಬೆಂಗಳೂರು , ಸೋಮವಾರ, 17 ನವೆಂಬರ್ 2008 (16:03 IST)
ಪ್ರಸಕ್ತ ವರ್ಷ ಸುಮಾರು 25 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಕೂಡಾ ಏರಿಕೆಯಾಗಿ ಸಾಪ್ಟ್‌ವೇರ್ ರಫ್ತಿಗೆ ಹೆಚ್ಚಿನ ಬೇಡಿಕೆಗಳು ಬಂದಿವೆ ಎಂದು ಇನ್ಫೋಸಿಸ್ ತಿಳಿಸಿದೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ವಹಿವಾಟಚಿನ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲವೆಂದು ದೇಶದ ಬೃಹತ್ ಎರಡನೇ ಮಾಹಿತಿ ತಂತ್ರಜ್ಞಾನ ರಫ್ತು ಸಂಸ್ಥೆಯಾದ ಇನ್ಫೋಸಿಸ್ ಹೇಳಿಕೆ ನೀಡಿದೆ.

ವಹಿವಾಟಿನ ದರಗಳ ಮೇಲೆ ಯಾವುದೇ ಒತ್ತಡವಾಗಲಿ ಅಥವಾ ಮತ್ತಿತರ ಸಂಗತಿಗಳಾಗಲಿ ಕಂಪೆನಿಯ ದರಗಳ ಮೇಲೆ ಬೀರಿಲ್ಲ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಸಾಫ್ಟ್‌ವೇರ್ ರಫ್ತಿನಲ್ಲಿ ಶೇ. 60 ರಷ್ಟು ಪಾಲನ್ನು ಹೊಂದಿರುವ ಅಮೆರಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆಟಿ ಕ್ಷೇತ್ರದ ಭಾರಿ ಒತ್ತಡವನ್ನು ಎದುರಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಜಾಗತಿಕ ಆರ್ಥಿಕ ಕುಸಿತ ಕೇವಲ ಐಟಿ ಕ್ಷೇತ್ರದ ಮೇಲೆ ಪರಿಣಾಮ ಬೀರಿಲ್ಲ .ರಿಟೇಲ್, ಉತ್ಪಾದಕ ವಸ್ತುಪಗಳು ಸೇರಿದಂತೆ ಮತ್ತಿತರ ಕ್ಷೇತ್ರರ್ಗಳ ಮೇಲೆ ಪರಿಣಾಮ ಬೀರಿದೆ ಎಂದು ಗೋಪಾಲ್ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ .

Share this Story:

Follow Webdunia kannada