Select Your Language

Notifications

webdunia
webdunia
webdunia
webdunia

24x7 ಕಾಯ್ದೆಯಿಂದ ಉದ್ಯೋಗ ಅವಕಾಶಗಳಲ್ಲಿ ಶೇ.50 ರಷ್ಟು ಹೆಚ್ಚಳ

24x7 ಕಾಯ್ದೆಯಿಂದ ಉದ್ಯೋಗ ಅವಕಾಶಗಳಲ್ಲಿ ಶೇ.50 ರಷ್ಟು ಹೆಚ್ಚಳ
ನವದೆಹಲಿ , ಗುರುವಾರ, 30 ಜೂನ್ 2016 (18:41 IST)
ಮಾದರಿ ಅಂಗಡಿ ಮುಗ್ಗಟ್ಟುಗಳು (ಉದ್ಯೋಗ ನಿಯಂತ್ರಣ ಮತ್ತು ಸೇವೆಗಳ ಷರತ್ತುಗಳು) 2015 ಕಾಯ್ದೆ ಅಂಗೀಕಾರದ ಹಿನ್ನೆಲೆಯಲ್ಲಿ ಅಂಗಡಿ ಮುಗ್ಗಟ್ಟು ಮತ್ತು ಮಾಲ್‌ಗಳು 24x7 ಕಾರ್ಯನಿರ್ವಹಿಸಲಿವೆ.
 
ತಜ್ಞರ ಹೇಳಿಕೆಯ ಪ್ರಕಾರ, ಉದ್ಯೋಗ ನಿಯಂತ್ರಣ ಮತ್ತು ಸೇವೆಗಳ ಷರತ್ತುಗಳ ಕಾಯ್ದೆಯನ್ನು ಎಲ್ಲಾ ರಾಜ್ಯಗಳು ಜಾರಿಗೊಳಿಸಿದರೆ, ಅಲ್ಪಾವಧಿ ಸಮಯದಲ್ಲಿ ಚಿಲ್ಲರೆ ವ್ಯಾಪರ ಸೇರಿದಂತೆ ಐಟಿ ಮತ್ತು ಸೇವಾ ವಲಯಗಳಲ್ಲಿ 10 ಪ್ರತಿಶತ ಉದ್ಯೋಗ ಸೃಷ್ಟಿಸಬಹುದಾಗಿದೆ. ಇದರಿಂದ, ಮಹಿಳಾ ಉದ್ಯೋಗಿಗಳು ರಾತ್ರಿ ಪಾಳಯದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿ ಲಿಂಗ ತಾರತಮ್ಯವನ್ನು ನಿವಾರಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 
 
ಚಿಲ್ಲರೆ ವ್ಯಾಪಾರ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳು ನೇರವಾಗಿ ಅಥವಾ ಪರೋಕ್ಷವಾಗಿ ಇಂತಹ ಕಾಯ್ದೆ ಜಾರಿಯಿಂದಾಗಿ ಲಾಭ ಪಡೆಯಬಹುದಾಗಿದೆ ಎಂದು ರಾಂಡ್‌ಸ್ಟಾಡ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಮೂರ್ತಿ ಕೆ. ಉಪ್ಪಾಲುರಿ ತಿಳಿಸಿದ್ದಾರೆ. 
 
ಪ್ರಸ್ತುತವಾಗಿ, ದೇಶದ ಚಿಲ್ಲರೆ ವ್ಯಾಪಾರ ಮಾರಾಟ ವಲಯದಲ್ಲಿ 4 ಕೋಟಿ ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದು, 2020 ಸಾಲಿನಲ್ಲಿ 50 ಪ್ರತಿಶತ ಹೆಚ್ಚಳದೊಂದಿಗೆ 6 ಕೋಟಿಗೆ ತಲುಪಲಿದೆ. ಉದ್ಯೋಗ ನಿಯಂತ್ರಣ ಮತ್ತು ಸೇವೆಗಳ ಷರತ್ತುಗಳು ಮಸೂದೆ ಜಾರಿಯಿಂದ ಮಹಿಳಾ ಉದ್ಯೋಗಿಗಳಿಂದಲೂ ಚಿಲ್ಲರೆ ಮಾರಾಟ ವಹಿವಾಟು ವೃದ್ಧಿಯಾಗಲಿದೆ ಎಂದು ರಿಟೈಲರ್ ಅಸೋಸಿಯೇಶನ್ ಆಫ್ ಇಂಡಿಯಾದ ಸಿಇಓ ಕುಮಾರ್ ರಾಜಗೋಪಾಲನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 2ರಂದು ನಡೆಯಲಿರುವ ಸಭೆಯಲ್ಲಿ ಗೊಂದಲಗಳಿಗೆ ತೆರೆ: ಯಡಿಯೂರಪ್ಪ