Select Your Language

Notifications

webdunia
webdunia
webdunia
webdunia

ಹೆಚ್‌ಡಿಎಫ್‌ಸಿಯಿಂದ ರಿಯಲ್ ಎಸ್ಟೇಟ್ ವೆಬ್‌ಸೈಟ್

ಹೆಚ್‌ಡಿಎಫ್‌ಸಿಯಿಂದ ರಿಯಲ್ ಎಸ್ಟೇಟ್ ವೆಬ್‌ಸೈಟ್
ಕೊಲ್ಕತಾ , ಬುಧವಾರ, 29 ಫೆಬ್ರವರಿ 2012 (21:05 IST)
PR
ಬೃಹತ್ ಗೃಹ ಸಾಲ ಪೂರೈಕೆ ಬ್ಯಾಂಕ್ ಹೆಚ್‌ಡಿಎಫ್‌ಸಿ ಇದೀಗ ತನ್ನ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮತ್ತಷ್ಟು ವೃದ್ದಿಸುವ ಸಲುವಾಗಿ ನೂತನ ವೆಬ್‌ಸೈಟನ್ನು ಆರಂಭಿಸಿದೆ. ಹೆಚ್‌ಡಿಎಫ್‌ಸಿ ರೆಡ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ವೆಬ್‌ಸೈಟ್ ಇದೀಗ ಕೊಲ್ಕತಾದಲ್ಲಿ ಆರಂಭಿಸಿದೆ.

ದೇಶದ ಸುಮಾರು 9,000 ವಿವಿಧ ಆಸ್ತಿ, ಪ್ರಮುಖ ನಗರಗಳಲ್ಲಿ 2,200 ಬೃಹತ್ ಯೋಜನೆಗಳ ವಿವರಗಳನ್ನು ಒಳಗೊಂಡಿದ್ದು ಯಾವುದೇ ನಗರಗಳಲ್ಲಿ ಆಸ್ತಿ ಅಥವಾ ಗೃಹ ಹೊಂದಬೇಕಿದ್ದರೆ ಈ ಹೆಚ್‌ಡಿಎಫ್‌ಸಿ ರೆಡ್ ವೆಬ್‌ಸೈಟಿನಿಂದ ಮಾಹಿತಿ ಪಡೆಯಬಹುದಾಗಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ರೆಡ್ ವೆಬ್‌ಸೈಟಿಗೂ ಯಾವುದೇ ನೇರ ಸಂಪರ್ಕವಿಲ್ಲ, ಆದರೆ ಹಣಕಾಸು ವಿಚಾರದಲ್ಲಿ ಅಗತ್ಯವಿದ್ದ ಸಂದರ್ಭದಲ್ಲಿ ವಿನಿಮಯ ವಹಿವಾಟುಗಳು ನಡೆಯುತ್ತದೆ ಎಂದು ಹೆಚ್‌ಡಿಎಫ್‌ಸಿ ಪ್ರಕಟಿಸಿದೆ.

Share this Story:

Follow Webdunia kannada