Webdunia - Bharat's app for daily news and videos

Install App

ಹೀರೋ ಬಿಡುಗಡೆ ಮಾಡಿದೆ ಸ್ಪ್ಲೆಂಡರ್ ಐಸ್ಮಾರ್ಟ್‌ ಬೈಕ್

Webdunia
ಸೋಮವಾರ, 17 ಮಾರ್ಚ್ 2014 (17:02 IST)
PR
ದೇಶದ ಬೈಕ್‌ ಉತ್ಪಾದನೆಯಲ್ಲಿ ಅಗ್ರ ಶ್ರೇಣಿಯಲ್ಲಿರುವ ಹೀರೋ ಮೋಟಾರ್ಸ್ ಕಾರ್ಪೋರೇಶನ್‌ ತನ್ನ ಹೊಸ ಬೈಕ್ ಹೀರೋ ಸ್ಪ್ಲೆಂಡರ್‌ ಐಸ್ಮಾರ್ಟ್‌‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅತ್ಯುತ್ತಮ ಆಕರ್ಷಕವಾದ ವಿನ್ಯಾಸ ಹೊಸ ವೈವಿಧ್ಯತೆಗಳನ್ನು ಮತ್ತು ಮೈಕ್ರೊ ಹೈಬ್ರಿಡ್‌ ತಂತ್ರಜ್ಞಾನದ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್‌‌ನ ಬೆಲೆ ಕೇವಲ 47,250 ರೂಪಾಯಿಗಳು ( ದೆಹಲಿಯ ಎಕ್ಸ್‌ ಶೋರುಂ ಪ್ರಕಾರ) ಮಾತ್ರ.

ಈ ಬೈಕ್‌ನಲ್ಲಿ ಎಲ್ಲಕ್ಕಿಂತ ಉತ್ತಮ ವಿಷಯವೇನೆಂದರೆ , ಯುನಿಕ್ ಐ3 ಎಸ್‌ ತಂತ್ರಜ್ಞಾನದಿಂದ ಸಿದ್ದ ಪಡಿಸಲಾಗಿದ್ದರಿಂದ ಶಕ್ತಿಶಾಲಿಯಾಗಿರುವುದಲ್ಲದೇ ಗರಿಷ್ಠ ಮೈಲೇಜ್‌ ಕೂಡಾ ನೀಡುತ್ತದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಈ ಬೈಕ್‌ನಲ್ಲಿ ಕಿಕ್‌ ಸ್ಟಾರ್ಟ್ ಜೊತೆಗೆ ಇಲೆಕ್ಟ್ರಾನಿಕ್ಸ್‌ ಸ್ಟಾರ್ಟ್‌ನ ಸೌಲಭ್ಯವಿದೆ. ಇದರಲ್ಲಿ 100 ಸಿಸಿಯ ಸಿಂಗಲ್ ಸಿಲಿಂಡರ್‌ ಇಂಜಿನ್‌ ಅಳವಡಿಸಲಾಗಿದೆ ಮತ್ತು 7.9 ಬಿಎಚ್‌‌‌‌‌‌ಪಿ ಪಾವರ್‌ , 8.04 ಎನ್‌‌‌‌ಎಮ್ ಟ್ರಾರ್ಕ್ ನೀಡುತ್ತದೆ.

ಗ್ರಾಹಕರ ಇಷ್ಟದ ಮೇರೆಗೆ ಈ ಬೈಕ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿವೆ. ಸ್ಪೋರ್ಟ್ಸ್‌ ರೆಡ್‌ , ಲೀಪ್ ಗ್ರೀನ್ , ಎಕ್ಸಿಲೆಂಟ್ ಬ್ಲ್ಯೂ ಮತ್ತು ಹೆವಿ ಗ್ರೇ ಬಣ್ಣದ ಬೈಕ್‌ಗಳು ಲಭ್ಯವಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments