Webdunia - Bharat's app for daily news and videos

Install App

ಸ್ನಾಪ್‍ಡೀಲ್‍ನಿಂದ ರಿಲಯನ್ಸ್ ಜಿಯೋ ಸಿಮ್ ಹೋಂ ಡೆಲಿವರಿ

Webdunia
ಗುರುವಾರ, 29 ಡಿಸೆಂಬರ್ 2016 (13:53 IST)
ಆನ್‍ಲೈನ್ ಶಾಪಿಂಗ್ ದಿಗ್ಗಜ ಸ್ನಾಪ್‍ಡೀಲ್ ಮತ್ತೊಂದು ಪ್ರಯೋಗಕ್ಕೆ ಸಿದ್ಧವಾಗಿದೆ. ತನ್ನ ಗ್ರಾಹಕರು ಎದುರು ನೋಡುತ್ತಿರುವ ರಿಯಲಯನ್ಸ್ ಜಿಯೋ ಸಿಮ್‌ಗಳನ್ನು ಅವರ ಮನೆಗೆ ತಲುಪಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಮೂಲಕ ಕೂತಿರುವಲ್ಲಿಗೆ ಜಿಯೋ ಸಿಮ್ ಬರಲಿದೆ.
 
ಸ್ನಾಪ್‍ಡೀಲ್ ಸೈಟ್ ಮೂಲಕ ಸಿಮ್ ಕಾರ್ಡನ್ನು ಬುಕ್ ಮಾಡಿಕೊಂಡ ಗ್ರಾಹಕರಿಗೆ ಅವರಿರುವಲ್ಲಿಗೆ ತಲುಪಿಸಿ ಅಲ್ಲೇ ಆಕ್ಟಿವೇಷನ್ ಸಹ ಮಾಡಲಿದ್ದಾರೆ. ವೆಲ್‍ಕಮ್ ಆಫರ್‌ನ ಜಿಯೋ ಸಿಮ್‌ಗಳನ್ನು ಉಚಿತವಾಗಿ ನೀಡಲಿದ್ದಾರೆ. ಮುಂಚಿತವಾಗಿ ತಮ್ಮ ಸಂಪೂರ್ಣ ವಿಳಾಸವನ್ನು ಸ್ನಾಪ್‌ಡೀಲ್‌ಗೆ ಕೊಡಬೇಕಾಗಿರುತ್ತದೆ.
 
ಡೆಲಿವರಿ ಸಮಯದಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ಆಕ್ಟಿವೇಷನ್ ಸಂದರ್ಭದಲ್ಲಿ ನೀಡಬೇಕಾಗುತ್ತದೆ. ಆಯ್ದ ಪ್ರದೇಶಗಳಲ್ಲಿ ಮಾತ್ರ ಈ ಸೌಲಭ್ಯವನ್ನು ಕಲ್ಪಿಸಿದೆ ಸ್ನಾಪ್‌ಡೀಲ್. ಇದಕ್ಕೆ ಸಂಬಂಧಿಸಿದಂತೆ ಸ್ನಾಪ್‌ಡೀಲ್ ತನ್ನ ಗ್ರಾಹಕರಿಗೆ ಇ-ಮೇಲ್‍ಗಳನ್ನು ಕಳುಹಿಸುತ್ತಿದೆ. ಅಧಿಕೃತವಾಗಿ ಈ ಸೇವೆ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಇನ್ನೂ ಪ್ರಕಟಣೆ ಹೊರಬಿದ್ದಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments