Select Your Language

Notifications

webdunia
webdunia
webdunia
webdunia

ಸೋನಿಯಿಂದ 3ಡಿ ಪರ್ಸನಲ್ ಥಿಯೇಟರ್; ವಯಸ್ಕರಿಗೆ ಮಾತ್ರ!

ಸೋನಿಯಿಂದ 3ಡಿ ಪರ್ಸನಲ್ ಥಿಯೇಟರ್; ವಯಸ್ಕರಿಗೆ ಮಾತ್ರ!
ಟೋಕಿಯೋ , ಶುಕ್ರವಾರ, 2 ಸೆಪ್ಟಂಬರ್ 2011 (11:57 IST)
ಫ್ರೆಂಡ್ಸು, ಫ್ಯಾಮಿಲಿ ಜತೆ ಕೂತು ಟಿವಿ ನೋಡಿ ತಲೆ ಜಿಡ್ಡು ಹಿಡಿದಂತಾಗಿದೆಯೇ?, ಎಲ್ಲಾದರೂ ದೂರ ಹೋಗಿ ನಿಮಗೆ ಇಷ್ಟಬಂದ ವೀಡಿಯೋಗಳನ್ನು ಎಷ್ಟು ಬೇಕಾದರೂ ಸೌಂಡ್ ಕೊಟ್ಟು ಕೇಳಬೇಕೆನಿಸಿದೆಯೇ. ಇನ್ನು ಚಿಂತಿಸುವ ಅಗತ್ಯವಿಲ್ಲ. ನಿಮ್ಮಂಥವರಿಗಾಗಿಯೇ ವಿಶ್ವದ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಕಂಪನಿ ಸೋನಿ, ಹೆಲ್ಮೆಟನ್ನೇ ಹೋಲುವಂತಾ ಪರ್ಸನಲ್ ಥಿಯೇಟರನ್ನು ಸಿದ್ಧಪಡಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದು ನೋಡಲು ಥೇಟ್ ಹೆಲ್ಮೆಟ್ ಧರಿಸಿದಂತೆಯೇ ಇರಲಿದ್ದು, ನೀವೇನು ನೋಡುತ್ತಿದ್ದೀರಾ ಎಂದು ಯಾವೊಬ್ಬನಿಗೂ ಇಣುಕಿ ನೋಡಲಾಗದು. ಅದರೊಳಗೆ 3ಡಿ ತಂತ್ರಜ್ಞಾನದ ವೀಡಿಯೋ ಪರದೆ, ಅದ್ಭುತ ಸೌಂಡ್ ಸಿಸ್ಟಮ್ ಅಳವಡಿಸಲಾಗಿರುತ್ತದೆ. ಚಲನಚಿತ್ರ, ಗೇಮ್ಸ್ ಸೇರಿದಂತೆ ನಿಮಗಿಷ್ಟ ಬಂದ ವೀಡಿಯೋಗಳನ್ನೆಲ್ಲ ಯಾರಿಗೂ ಗೊತ್ತಾಗದ ಹಾಗೆ ಗುಪ್ತವಾಗಿ ನೋಡಬಹುದು ಎನ್ನುತ್ತಿದೆ ಕಂಪನಿ.

ಆದರೆ 'ಪರ್ಸನಲ್ ಥಿಯೇಟರ್' ಕಡ್ಡಾಯವಾಗಿ ವಯಸ್ಕರಿಗಾಗಿ ಮಾತ್ರ ಎಂಬ ಎಚ್ಚರಿಕೆಯನ್ನೂ ಸೋನಿ ನೀಡಿದೆ. ಏಕೆಂದರೆ ಅದೀಗ ತಾನೇ ಬೆಳೆಯುತ್ತಿರುವ ಹದಿನೈದು ವರ್ಷದವರೆಗಿನ ಮಕ್ಕಳಲ್ಲಿ ಇದು ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಎನ್ನುತ್ತಿದೆ ಕಂಪನಿ.

ಅಂದರೆ, ಹದಿನೈದು ವರ್ಷದ ಒಳಗಿನ ಮಕ್ಕಳಲ್ಲಿ ಬೌದ್ಧಿಕ ಬೆಳವಣಿಗೆ ಚುರುಕಾಗಿದ್ದು, ಹೆಲ್ಮೆಟ್‌ನಂಥಾ ವಿವಿಧ ತಂತ್ರಜ್ಞಾನವನ್ನು ಒಳಗೊಂಡ ಪರ್ಸನಲ್ ಥಿಯೇಟರ್‌ನ್ನು ಅವರಿಗೆ ಬಳಸಲು ಕೊಟ್ಟರೆ ಅದಕ್ಕೊಂದು ಮಿತಿಯಿರುವುದಿಲ್ಲ.

ಬದಲಾಗಿ, ಅಷ್ಟೊಂದು ಹತ್ತಿರದಿಂದ 3ಡಿ ದೃಶ್ಯಗಳನ್ನು ನೋಡುವುದು ಕಣ್ಣಿಗೂ ಹಾಳು. ಜತೆಗೆ ಕಿವಿಗಡಚಿಕ್ಕುವ ಅಬ್ಬರದ ಶಬ್ಧದಲ್ಲೇ ಆ ವಯಸ್ಸಿನ ಮಕ್ಕಳು ಮೈಮರೆಯುವುದರಿಂದ ಭವಿಷ್ಯದಲ್ಲಿ ಶ್ರವಣದೋಷ ಸಂಭವಿಸುವ ಸಾಧ್ಯತೆಯೂ ಹೆಚ್ಚು. ಇತ್ಯಾದಿ, ಇತ್ಯಾದಿ ಕಾರಣಗಳಿಂದ ಮಕ್ಕಳ ಬೌದ್ಧಿಕ ಶಕ್ತಿಯ ಮೇಲೂ ತೊಡಕಾಗುವ ಸಾಧ್ಯತೆ ಇರುತ್ತದೆ ಎಂಬ ಕಾರಣದಿಂದ ಸೂಚ್ಯವಾಗಿ ವಯಸ್ಕರಿಗೆ ಮಾತ್ರ ಎನ್ನುತ್ತಿದೆ ಸೋನಿ. ಇನ್ನೇನಿಲ್ಲ.

ಮತ್ತೆ, 3ಡಿ ಪರದೆ ಹಾಗೂ ಶಬ್ದ ಗುಣಮಟ್ಟದ ಕುರಿತು ಒಂದೇ ಮಾತಲ್ಲಿ ನಿಮ್ಮ ಲ್ಯಾಪ್ ಟಾಪ್ ಮತ್ತು ಫ್ಲ್ಯಾಟ್ ಟಿವಿಗಿಂತಲೂ ಸ್ಪಷ್ಟವಾಗಿರುತ್ತದೆ ಎನ್ನುತ್ತಿದೆ ಸೋನಿ. ಯಾವುದಕ್ಕೂ ಮಾರುಕಟ್ಟೆಗೆ ಬಂದ ಮೇಲೆ ನೋಡೋಣ ಬಿಡಿ. ನವೆಂಬರ್‌ನಲ್ಲಿ ಜಪಾನ್ ಮಾರುಕಟ್ಟೆಗೆ ಬರಲಿದೆ. ಅಲ್ಲಿಂದ ಕೆಲವೇ ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಾಧ್ಯತೆ ಹೆಚ್ಚು. ಬೆಲೆ ಬಗ್ಗೆ ಮತ್ತೆ ನೋಡೋಣ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada