Webdunia - Bharat's app for daily news and videos

Install App

ವಿಮಾನ ನಿಲ್ದಾಣ ಅಭಿವೃದ್ಧಿ ಸಂಗ್ರಹ ಶುಲ್ಕ ಹೆಚ್ಚಳಕ್ಕೆ ವಿರೋಧ

Webdunia
ಗುರುವಾರ, 4 ಜುಲೈ 2013 (13:17 IST)
ನಿಲ್ದಾಣ ಅಭಿವೃದ್ಧಿಗೆ ಬಳಕೆದಾರರಿಂದ ಸಂಗ್ರಹಿ ಸುವ ಶುಲ್ಕ'ವನ್ನು(ಯುಡಿಎಫ್) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವುದಕ್ಕೆ ಸಂಬಂಧಿಸಿ `ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿ.'(ಬಿಐಎಎಲ್) ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ನೀಡಲು `ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ'(ಎಇಆರ್‌ಎ) ನಿರಾಕರಿಸಿದೆ.

ದೇಶೀಯ ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ಶುಲ್ಕವನ್ನು ಶೇ 239ರಷ್ಟು (ರೂ783.09ಕ್ಕೆ) ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಶುಲ್ಕವನ್ನು ಶೇ 79ರಷ್ಟು(ರೂ1700ಕ್ಕೆ) ಹೆಚ್ಚಿಸಲು `ಬಿಐಎಎಲ್' ಮುಂದಾಗಿತ್ತು.

ಹೈದರಾಬಾದ್ ಮೂಲದ ಮೂಲ ಸೌಕರ್ಯ ವಲಯದ ಅಭಿವೃದ್ಧಿ ಸಂಸ್ಥೆ `ಜಿವಿಕೆ ಸಮೂಹ'ದ ಅಂಗಸಂಸ್ಥೆಯಾ ದ` ಬಿಐಎಎಲ್', ಎಲ್ಲ ವಿಮಾನಗಳಿಗೂ ನಿಲ್ದಾಣದಲ್ಲಿ ಇಳಿಯುವುದಕ್ಕೆ ಶುಲ್ಕ ವಿಧಿಸಲು ಸಹ ಅನುಮತಿ ಕೋರಿತ್ತು. ಅದಕ್ಕೂ `ಎಇಆರ್‌ಎ' ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.

ದೇಶೀಯ ಪ್ರಯಾಣಿಕರಿಂದ ರೂ262.32 ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸುವವರಿಂದ ರೂ1049.27 `ಯುಡಿಎಫ್' ಸಂಗ್ರಹಿಸ ಬಹುದು ಎಂಬುದು `ಎಇಆರ್‌ಎ'ನ ಸಲಹೆಯಾಗಿದೆ. ಸದ್ಯ ಕ್ರಮವಾಗಿ ರೂ231.40 ಮತ್ತು ರೂ952.30 ಶುಲ್ಕ ಸಂಗ್ರಹಿಸಲಾಗುತ್ತಿದೆ.

` ಎಇಆರ್‌ಎ' ಕ್ರಮಕ್ಕೆ ಈಗಲೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇನ್ನೂ ಮಾತುಕತೆಗೆ ಅವಕಾಶವಿದೆ ಎಂದು `ಜಿವಿಕೆ' ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments