Select Your Language

Notifications

webdunia
webdunia
webdunia
webdunia

ವಿಪ್ರೋ: ಜಂಟಿ ಸಿಇಒಗಳ ಸ್ಥಾನಕ್ಕೆ ಹೊಸ ಸಿಇಒ

ವಿಪ್ರೋ: ಜಂಟಿ ಸಿಇಒಗಳ ಸ್ಥಾನಕ್ಕೆ ಹೊಸ ಸಿಇಒ
ಬೆಂಗಳೂರು , ಶುಕ್ರವಾರ, 21 ಜನವರಿ 2011 (17:01 IST)
PR
PR
ಭಾರತದ ಉನ್ನತ ಸಾಫ್ಟ್‌‌ವೇರ್ ಕಂಪನಿ ವಿಪ್ರೋ, ತನ್ನ ಕಂಪನಿಗೆ ಟಿ.ಕೆ. ಕುರಿಯನ್ ಅವರನ್ನು ಜಾಗತಿಕ ಐಟಿ ವ್ಯವಹಾರಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಿಕೊಂಡಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಜಂಟಿ ಮುಖ್ಯ ಕಾರ್ಯನಿರ್ವಾಹಕರಾದ ಗಿರೀಶ್ ಪರಾಂಜಪೆ ಮತ್ತು ಸುರೇಶ್ ವಾಸ್ವಾನಿ ಅವರು ಫೆಬ್ರವರಿ ಒಂದರಂದು ನಿವೃತ್ತರಾಗಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಪ್ರಸ್ತುತ ಕುರಿಯನ್ ಅವರು, ಈ ಹಣಕಾಸು ವರ್ಷದ ಆದಿಯಲ್ಲಿ ಆರಂಭಿಸಲಾಗಿದ್ದ ಕಂಪನಿಯ ನೈಸರ್ಗಿಕ ಶಕ್ತಿ ವಿಭಾಗದ ಮುಖ್ಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಜಂಟಿ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥೆಯು ಕಂಪನಿಯನ್ನು ಆರ್ಥಿಕ ಹಿಂಜರಿಕೆಯ ಸಂದರ್ಭದಲ್ಲಿ ಆರ್ಥಿಕವಾಗಿ ತಲೆಯೆತ್ತಿ ನಿಲ್ಲಲು ಸಹಕಾರಿಯಾಗಿದೆ ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಪರಾಂಜಪೆ ಮತ್ತು ವಾಸ್ವಾನಿ ಅವರು ಕಂಪನಿಯ ಮುಂದಾಳುತ್ವ ತಂಡದ ಅವಿಭಾಜ್ಯ ಅಂಗವಾಗಿದ್ದರು. ಸಂಸ್ಥೆಯ ವಾತಾವರಣದಲ್ಲಿ ಬದಲಾವಣೆಯಾಗಿದೆ, ಸರಳ ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದೆ. ಕುರಿಯನ್ ಅವರಿಗಿರುವ ಅಪ್ರತಿಮ ಪ್ರತಿಭೆ ಕಂಪನಿಯನ್ನು ಮುಂದಿನ ಹಂತದ ಏಳಿಗೆಯ ಮುಂದಾಳುತ್ವ ವಹಿಸಲಿದೆ ಎಂದು ಪ್ರೇಮ್‌ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada