Select Your Language

Notifications

webdunia
webdunia
webdunia
webdunia

ವಾರ್ತಾ ಇಲಾಖೆಯ ಹೊಸ ವೈಬ್‌ಸೈಟ್ ಆರಂಭ

ವಾರ್ತಾ ಇಲಾಖೆಯ ಹೊಸ ವೈಬ್‌ಸೈಟ್ ಆರಂಭ
ಬೆಂಗಳೂರು , ಬುಧವಾರ, 29 ಫೆಬ್ರವರಿ 2012 (18:43 IST)
PTI
ವಾರ್ತಾ ಇಲಾಖೆಯ ಹೊಸ ವೆಬ್‌ಸೈಟನ್ನು ಮುಖ್ಯಮಂತ್ರಿ ಸದಾನಂದ ಗೌಡ ಬುಧವಾರ ಉದ್ಘಾಟಿಸಿದ್ದಾರೆ. ನೂತನ ವೆಬ್‌ಸೈಟ್ karnatakavarthe.org ಸರ್ಕಾರಿ ಕಾರ್ಯಚಟುವಟಿಕೆಯ ಮಾಹಿತಿ, ಛಾಯಾಚಿತ್ರ, ಟೆಂಡರ್ ಪ್ರಕಟಣೆ ಸೇರಿದಂತೆ ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸುತ್ತದೆ.

ಈ ಹಿಂದೆ ಇದ್ದ ವೆಬ್‌ಸೈಟ್ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತ್ತು. ಇದೀಗ ಪರಿಚಯಿಸಲಾಗಿರುವ ನೂತನ ವೆಬ್‌ಸೈಟ್ ಪರಿಷ್ಕೃತ ತಂತ್ರಜ್ಞಾನದ್ದಾಗಿರುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada